Connect with us

Dvgsuddi Kannada | online news portal | Kannada news online

SBI ನಲ್ಲಿ 2056 ಪ್ರೊಬೆಷನರಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

SBI ನಲ್ಲಿ 2056 ಪ್ರೊಬೆಷನರಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ದೇಶದ ಅತೀ ದೊಡ್ಡ ಸರ್ಕಾರಿ ಬ್ಯಾಕಿಂಗ್ ಸಂಸ್ಥೆ ಎಸ್ ಬಿಐ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಸುಮಾರು 2056 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

 •  ಹುದ್ದೆಪ್ರೊಬೆಷನರಿ ಆಫೀಸರ್ಸ್
 • ಹುದ್ದೆಗಳ ಸಂಖ್ಯೆ2056
 • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ.
 • ಪದವಿ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು, ಒಂದು ವೇಳೆ ಸಂದರ್ಶನಕ್ಕೆ ಕರೆದರೆ, ಅವರು 31 ನೇ ಡಿಸೆಂಬರ್ 2021 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
 • ಅರ್ಜಿ ಸಲ್ಲಿಕೆಆನ್ ಲೈನ್
 • ಅರ್ಜಿ ಸಲ್ಲಿಕೆ ದಿನಾಂಕ: ಅಕ್ಟೋಬರ್ 5 ರಿಂದ ಅಕ್ಟೋಬರ್ 25ರವರೆಗೆ
 • ಪರೀಕ್ಷಾ ಪ್ರಕ್ರಿಯೆ
 • ಮೊದಲ ಹಂತಆನ್ಲೈನ್ ಪೂರ್ವಭಾವಿ ಪರೀಕ್ಷೆ – ನವೆಂಬರ್/ ಡಿಸೆಂಬರ್ 2021
  ಎರಡನೇ ಹಂತಆನ್ಲೈನ್ ಮುಖ್ಯ ಪರೀಕ್ಷೆ – ಡಿಸೆಂಬರ್ 2021
  ಮೂರನೇ ಹಂತಸಂದರ್ಶನ (ಅಥವಾ ಸಂದರ್ಶನ ಮತ್ತು ಗುಂಪು ವ್ಯಾಯಾಮಗಳು) ಫೆಬ್ರವರಿ 2022 ರ 2ನೇ ಅಥವಾ 3ನೇ ವಾರ

ವಯೋಮಿತಿ:01.04.2021 ರಂತೆ, 21 ವರ್ಷಕ್ಕಿಂತ ಕಡಿಮೆ ಇರಬಾರದು. 1.04.2021 ರಂತೆ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 1.04.2000 ಕ್ಕಿಂತ ಮುಂಚಿತವಾಗಿ ಜನಿಸಿಲ್ಲ ಮತ್ತು 2.04.1991ರ ನಂತರ ಜನಿಸಿರಬಾರದು.ಗರಿಷ್ಠ ವಯಸ್ಸಿನ ಮಿತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ 5 ವರ್ಷ, ಇತರೆ ಹಿಂದುಳಿದ ವರ್ಗಗಳಿಗೆ 3 ವರ್ಷ

ಶುಲ್ಕಪಾವತಿ: ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಆನ್ ಲೈನ್ ನೋಂದಣಿ ಕಡ್ಡಾಯನೋಂದಣಿ ಮಾಡಬೇಕಾದ ಲಿಂಕ್:
https://bank.sbi/careers , https://www.sbi.co.in/careers ಸಂಪರ್ಕಿಸಿ .

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top