Connect with us

Dvgsuddi Kannada | online news portal | Kannada news online

ಟೊಮ್ಯಾಟೋ ಉತ್ತಮ ಇಳಿವರಿಗೆ ಸಮಗ್ರ ಪೋಷಕಾಂಶ ಅಗತ್ಯ: ತೋಟಗಾರಿಕೆ ತಜ್ಞ ಬಸವನಗೌಡ

ಕೃಷಿ ಖುಷಿ

ಟೊಮ್ಯಾಟೋ ಉತ್ತಮ ಇಳಿವರಿಗೆ ಸಮಗ್ರ ಪೋಷಕಾಂಶ ಅಗತ್ಯ: ತೋಟಗಾರಿಕೆ ತಜ್ಞ ಬಸವನಗೌಡ

ದಾವಣಗೆರೆ: ಟೊಮ್ಯಾಟೋ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ ಎಂದು ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ  ಬಸವನಗೌಡ ಎಂ. ಜಿ. ಅಭಿಪ್ರಾಯಪಟ್ಟರು.

ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ವ್ಶೆಜ್ಞಾನಿಕ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಈ ಗ್ರಾಮದಲ್ಲಿ ಕೇಂದ್ರದವತಿಯಿಂದ ಟೊಮ್ಯಟೋ ಬೆಳೆಯಲ್ಲಿ ಉತ್ತಮ ಇಳುವರಿಯ ಪೋಷಕಾಂಶಗಳ ತುಲನೆಯ ಬಗ್ಗೆ ಕ್ಷೇತ್ರ ಪ್ರಯೋಗವನ್ನು ಹಮ್ಮಿಕೊಂಡಿದ್ದು, ಪೋಷಕಾಂಶ ನಿರ್ವಹಣೆಗಾಗಿ ತರಕಾರಿ ಸ್ಪೆಷಲ್ 5 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು ಹಾಗೂ ಸಮುದ್ರ ಕಳೆಯ ದ್ರಾವಣ ಸಾಗರೀಕಾವನ್ನು 2 ಮಿಲೀ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವ ತಂತ್ರಜ್ಞಾನವನ್ನು ಪರಿಚಯಿಸಿದ್ದೇವೆ.  ಪ್ರಸ್ತುತ ಬೆಳೆ ಹಣ್ಣಿನ ಹಂತದಲ್ಲಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

ಪ್ರಸ್ತುತ ಕಳೆದ ವಾರದಿಂದ ಹಗಲು ಉಷ್ಣಾಂಶ ಹೆಚ್ಚಾಗುತ್ತಿದ್ದು ಸಂಜೆ ವೇಳೆ ಉತ್ತಮ ಮಳೆಯಾಗುತ್ತಿದೆ.  ಈ ಸಂದರ್ಭದಲ್ಲಿ ಟೊಮ್ಯಾಟೋ ಬೆಳೆಗೆ ಕೊನೆ ಅಂಗಮಾರಿ ರೋಗ ಬರುವ ಸಂಭವವಿದ್ದು ರೈತರು ಮುನ್ನೆಚ್ಚರಿಕೆಯಾಗಿ ಅಜಾಕ್ಸಿಸ್ಟೋಬಿಲಿನ್ 0.75  ಮಿಲೀ ಅಥವಾ ಮ್ಯಾಂಕೋಜೆಬ್ 2  ಗ್ರಾಂ. ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ.ಜಿ., ತೋಟಗಾರಿಕೆ ವಿದ್ಯಾರ್ಥಿಗಳಾದ ಪಲ್ಲವಿ, ಚಂದ್ರಾನಾಯಕ್, ರೈತರಾದ ವಾಮದೇವಪ್ಪ, ಬಸವರಾಜ ಹಾಜರಿದ್ದರು.

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕೃಷಿ ಖುಷಿ

To Top