Connect with us

Dvgsuddi Kannada | online news portal | Kannada news online

ಬ್ಯಾಂಕ್ ಗಳಿಂದ ಸಾಲ ಪಡೆದವರು ಸದ್ಬಳಕೆ ಮಾಡಿಕೊಂಡು ಮೋಸ ಮಾಡದೇ ಮರು ಪಾವತಿ ಮಾಡಬೇಕು; ಜಿಲ್ಲಾಧಿಕಾರಿ

ದಾವಣಗೆರೆ

ಬ್ಯಾಂಕ್ ಗಳಿಂದ ಸಾಲ ಪಡೆದವರು ಸದ್ಬಳಕೆ ಮಾಡಿಕೊಂಡು ಮೋಸ ಮಾಡದೇ ಮರು ಪಾವತಿ ಮಾಡಬೇಕು; ಜಿಲ್ಲಾಧಿಕಾರಿ

ದಾವಣಗೆರೆ:  ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾಂಕ್ ಗಳು ಸಾಲ ನೀಡುತ್ತವೆ. ಸಾಲವನ್ನು ಪಡೆದ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಬ್ಯಾಂಕುಗಳಿಗೆ ಮೋಸ ಮಾಡುವ ದುರಾಲೋಚನೆ ಬರಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಲೀಡ್ ಬ್ಯಾಂಕ್ ಕಚೇರಿ ವತಿಯಿಂದ ಸ್ವತಂತ್ರ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಸಾರ್ವಜನಿಕರು ಸಾಲ ಪಡೆಯುವಾಗ ತುಂಬಾ ಖುಷಿಯಿಂದ ಪಡೆಯುತ್ತಾರೆ. ಸಾಲ ಮರುಪಾವತಿ ಮಾಡಿದರೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಇದನ್ನು ಸಾರ್ವಜನಿಕ ಅರಿತು ಸಾಲ ಮರುಪಾವತಿ ಮಾಡಬೇಕಾಗಿದೆ. ಅಲ್ಲದೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಬ್ಯಾಂಕಿನ ಅಧಿಕಾರಿಗಳು ಸಹ ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ ಎಂದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎ. ಚನ್ನಪ್ಪ ಮಾತನಾಡಿ, ಇದು ಮಾಹಿತಿಯುಗ, ತಂತ್ರಜ್ಞಾನ ಯುಗ. ನಮಗೆ ಬೇಕಾದಾಗ ಎಲ್ಲಾ ಮಾಹಿತಿಗಳು ಕೈಬೆರಳಲ್ಲಿ ದೊರೆಯುತ್ತವೆ. ಯಾವ ಬ್ಯಾಂಕ್ ಯಾವ ಯೋಜನೆ ಮೇಲೆ ಎಷ್ಟು ಸಾಲ ನೀಡುತ್ತವೆ. ಅಲ್ಲದೆ ಎಷ್ಟು ಬಡ್ಡಿ ದರ ವಿಧಿಸುತ್ತವೆ ಎನ್ನುವುದು ತಕ್ಷಣವೇ ಸಿಗುತ್ತದೆ. ಈ ಹಿಂದೆ ದಾಖಲೆ ನೀಡಿದರೂ ಸಹ ಸಾಲ ಮಂಜೂರಾತಿ ಕಷ್ಟವಾಗುತ್ತಿತ್ತು. ಆದರೆ ಇದೀಗ ಸಾಲ ನೀಡಿಕೆಗೆ ನಿಯಮಗಳ ಸರಳೀಕರಣ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಜನರೂ ಸಹ ಅನೇಕ ಬದಲಾವಣೆಗಳನ್ನು ಹೊಂದಿದ್ದಾರೆ. ಹಣ ಇದ್ದರೆ ಮಾತ್ರ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬಹುದು. ಕಾರಣ ಜನರು ಬ್ಯಾಂಕ್ ಗಳತ್ತ ಧಾವಿಸಿ ಸಾಲ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಕಿವಿಮಾತು ಹೇಳಿದರುಸಾಲ ಪಡೆದ ನಂತರ ಸಾಲ ಪಡೆದ ಉದ್ದೇಶಕ್ಕಾಗಿ ಬಳಸಬೇಕಾಗಿ ಬೇಕೆ ವಿನಃ ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಬಾರದು ಆಗ ನಾವು ಸಾಲಗಾರರಾಗಿಯೇ ಉಳಿಯುತ್ತೇವೆ. ಸಾಲ ಪಡೆದ ಸಾಲವನ್ನು ನ್ಯಾಯಯುತವಾಗಿ ಜನರು ಮರು ಪಾವತಿ ಮಾಡಿದಾಗ ಮಾತ್ರ ಜನರು ಸ್ವಾವಲಂಬಿಗಳಾಗುತ್ತಾರೆ. ಅಲ್ಲದೆ ಬ್ಯಾಂಕ್ ಗಳು ಉತ್ತಮವಾಗಿ ಬೆಳೆಯುತ್ತವೆ. ಮಾತ್ರವಲ್ಲ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂದರು.

ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಜಿ.ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅರ್ಥಪೂರ್ಣ ಆಚರಣೆಯ ಭಾಗವಾಗಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಸೂಚನೆಯಂತೆ ಇಂದು ದೇಶದಾದ್ಯಂತ 75 ಕೇಂದ್ರಗಳಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಾಲ ಸಂಪರ್ಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಜೂನ್ 6 ರಿಂದ 12 ರ ತನಕ ವಿಶೇಷವಾದ ಸಪ್ತಾಹವನ್ನಾಗಿ (ICONIC WEEK) ಆಚರಿಸುವ ಮೂಲಕ ಹಣಕಾಸು ಸೇವೆಗೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು. ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಎಲ್ಲಾ ಬ್ಯಾಂಕುಗಳ ಸೇವೆಗಳು ಒಂದೇ ವೇದಿಕೆಯಲ್ಲಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಲಭ್ಯವಾಗಿಸುವುದು ನಮ್ಮ ಉದ್ದೇಶ ಎಂದರು.

ನಬಾರ್ಡ್ ನ ಡಿಡಿಎಂ ವಿ.ರವೀಂದ್ರ ಮಾತನಾಡಿ ನಬಾರ್ಡ್ ನಿಂದ ಸ್ವಸಹಾಯ ಸಂಘಗಳು, ಸಿಸಿ ಕಾರ್ಡ್ ಗಳು ಅಲ್ಲದೆ ಹೈನುಗಾರಿಕೆ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿ, ಉತ್ಪಾದಕ ಘಟಕಗಳಿಗೆ ಸಾಲ ನೀಡಲಾಗುತ್ತದೆ ಇವುಗಳ ಸಾಲ ಸೌಲಭ್ಯ ಪಡೆದು ಜನರು ಆರ್ಥಿಕ ಸ್ವಾವಲಂಬಿಗಳಾಗಬೇಕು.ಅಲ್ಲದೇ ಸಬ್ಸಿಡಿ ಸಹಿತ ಸಾಲ ಸೌಲಭ್ಯ  ದೊರಕಲಿದೆ. ಆದರೆ ಕಳೆದ 2ವರ್ಷಗಳಿಂದ ಕೊವುಡ್ ನಿಂದಾಗಿ ಯಾವುದೇ ಸಬ್ಸಿಡಿ ಸಾಲ ನೀಡಲಾಗುತ್ತಿಲ್ಲ. ಅಕ್ಟೋಬರ್ ರ ನಂತರ ಇದು ಮತ್ತೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು .

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ವೈ.ವಿ.ಎನ್. ಶಿವಪ್ರಸಾದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಮಹಾಪ್ರಬಂಧಕ ಅನಿಲ್ ಬಿಹಾರಿ, ಸಹಾಯಕ ಮಹಾಪ್ರಬಂಧಕ ನಾಗೇಶ್ ಪ್ರಭು, ಎ.ರಾಜಾಮಣಿ, ಆರ್.ವಿ.ಎಸ್. ವಿ. ಶ್ರೀಧರ್ ಇತರರು ಇದ್ದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.

 

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top