Connect with us

Dvgsuddi Kannada | online news portal | Kannada news online

ಜೂನ್ 21 ರಂದು ದಾವಣಗೆರೆ ಮೋತಿ ವೀರಪ್ಪ ಹೈಸ್ಕೂಲ್ ಮೈದಾನದಲ್ಲಿ 5 ಸಾವಿರ ಜನರಿಂದ ಯೋಗ ಪ್ರದರ್ಶನ

ದಾವಣಗೆರೆ

ಜೂನ್ 21 ರಂದು ದಾವಣಗೆರೆ ಮೋತಿ ವೀರಪ್ಪ ಹೈಸ್ಕೂಲ್ ಮೈದಾನದಲ್ಲಿ 5 ಸಾವಿರ ಜನರಿಂದ ಯೋಗ ಪ್ರದರ್ಶನ

ದಾವಣಗೆರೆ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 5 ಸಾವಿರ ಜನರಿಂದ ಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಅವರು ಜೂನ್ 12 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಿದ್ದತೆಗಳ ಕುರಿತು ಮಾತನಾಡಿದರು. ಜೂನ್ 21 ರಂದು 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಾಡಲಾಗುತ್ತಿದೆ. ಈ ವರ್ಷವೂ ವಸುದೈವ ಕುಟುಂಬಕಂ ಧ್ಯೇಯದಡಿ ಪ್ರತಿ ಮನೆಯ ಅಂಗಳದಲ್ಲಿ ಯೋಗ ಎಂಬ ಘೋಷ ವಾಕ್ಯದಡಿ ಯೋಗಾಚರಣೆ ಮಾಡಲಾಗುತ್ತಿದೆ ಎಂದರು.

ಯೋಗ ದಿನಾಚರಣೆಯನ್ನು ಮೋತಿ ವೀರಪ್ಪ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ. ಬೆಳಗ್ಗೆ 5.30 ರಿಂದ 6.30 ರವರೆಗೆ ಬ್ರಹ್ಮ ಕುಮಾರಿಯವರಿಂದ ಧ್ಯಾನ, 6.30 ರಿಂದ 7 ರ ವರೆಗೆ ಉದ್ಘಾಟನೆ, 7 ರಿಂದ 7.30 ಸಾಮಾನ್ಯ ಯೋಗ, 7.30 ರಿಂದ 8.30 ರವರೆಗೆ ವೇದಿಕೆ ಕಾರ್ಯಕ್ರಮ, 8.30 ರಿಂದ 9 ರ ವರೆಗೆ ಉಪಹಾರ ಮತ್ತು 10 ಗಂಟೆವರೆಗೆ ಇತರೆ ಚಟುವಟಿಕೆಗಳು ನಡೆಯುತ್ತವೆ ಎಂದರು.

ಯೋಗ ಕಲಿತವರ ಅಂಕಿ ಅಂಶ ನೀಡಿ; ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಲು ಮತ್ತು ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಯೋಗ ಪ್ರಮುಖವಾಗಿದ್ದು ಒತ್ತಡಮುಕ್ತ ಜೀವನಕ್ಕೆ ಎಲ್ಲರ ಮನೆಯ ಅಂಗಳದಲ್ಲಿ ಯೋಗ ಸಹಕಾರಿಯಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸಲು ಯೋಗ ದಿನಾಚರಣೆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಯೋಗದ ಮಹತ್ವವನ್ನು ತಿಳಿಸಲಾಗಿದೆ.

ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ವಿವಿಧ ಯೋಗ ಸಂಸ್ಥೆಗಳ ಮೂಲಕ ಯೋಗಾಸನಕ್ಕೆ ತರಬೇತಿ ನೀಡಿದ ವಿವರ ಮತ್ತು ಜಿಲ್ಲೆಯಲ್ಲಿನ ಎಲ್ಲಾ ಜನರಿಗೂ ಯೋಗದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರವನ್ನು ಸಂಗ್ರಹಿಸಲು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಸರಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಆಯುಷ್ ಅಧಿಕಾರಿ ಡಾ; ಶಂಕರಗೌಡ ಹಾಗೂ ವಿವಿಧ ಯೋಗ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top