Connect with us

Dvgsuddi Kannada | online news portal | Kannada news online

ದಾವಣಗೆರೆ: ನೀರು ಸಂಗ್ರಹಣಾ ಘಟಕ ಸ್ಥಾಪನೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ನೀರು ಸಂಗ್ರಹಣಾ ಘಟಕ ಸ್ಥಾಪನೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಡಿವಿಜಿ ಸುದ್ದಿ, ದಾವಣಗೆರೆ:  2020-21 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆಲಮಟ್ಟಕ್ಕಿಂತ ಮೇಲೆ (ಅಬವ್ ಗ್ರೌಂಡ್ ಲೆವೆಲ್-ಸ್ಟೀಲ್ ಟ್ಯಾಂಕ್) ರಚಿಸುವ ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ರೈತರಿಂದ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಗೆ  8 ಭೌತಿಕ ಘಟಕ ಸ್ಥಾಪನೆ ಮಾಡಲು ಆರ್ಥಿಕ ರೂ.27.75 ಲಕ್ಷಗಳ ಸಹಾಯ ಧನ ಬಂದಿದ್ದು,ಆಸಕ್ತ ರೈತರು ಅರ್ಜಿಸಲ್ಲಿಸಬಹುದು. ಒಂದು ಲಕ್ಷ ಲೀಟರ್ ಮತ್ತು 2 ಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ  ಕ್ರಮವಾಗಿ ರೂ.3.25 ಹಾಗೂ ರೂ. 5.00 ಲಕ್ಷ ಸಹಾಯಧನ ಲಭ್ಯವಿದೆ.

ಆಸಕ್ತಿಯುಳ್ಳ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ರೈತರು ಸಂಬಂಧಪಟ್ಟ ತಾಲ್ಲೂಕುಗಳ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});