ದಾವಣಗೆರೆ: ನಗರದ ಟಿ.ವಿ ಸ್ಟೇಷನ್ ಕುಡಿಯುವ ನೀರು ಘಟಕವನ್ನು ತಾತ್ಕಾಲಿಕವಾಗಿ ಹತ್ತು ಕಾಲ ನಿಲುಗಡೆಗೊಳಿಸುತ್ತಿದ್ದು ಕುಡಿಯುವ ನೀರು ಸರಬರಾಜಿನಲ್ಲಿ ಜ.09ರವರೆಗೆ ವ್ಯತ್ಯಯವಾಗಲಿದೆ.
ಕೆ.ಯು.ಐ.ಡಿ.ಎಫ್.ಸಿ ಇಲಾಖೆಯಿಂದ ಜಲಸಿರಿ ಯೋಜನೆಯಡಿ ಟಿ.ವಿ ಸ್ಟೇಷನ್ ಕುಡಿಯುವ ನೀರಿನ ಕೆರೆಯಲ್ಲಿ ಪುನಃಶ್ಚೇತನ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 30 ರಿಂದ ಜನವರಿ 9, 2026 ರವರೆಗೆ ಈ ಕೆಳಗಿನ ಏರಿಯಾದಲ್ಲಿ ವ್ಯತ್ಯಯವಾಗಲಿದೆ.
ಬೇಸಿಗೆ ಹಂಗಾಮಿನ ಬೆಳೆಗೆ ನೀರು: ಜ.2ರಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ
ಎಸ್.ಪಿ.ಬಿ ಕಾಲೋನಿ, ಕೆ.ಎಸ್.ಆರ್.ಟಿ.ಸಿ ಡಿಪೋ ಮತ್ತು ಎನ್.ಸಿ.ಸಿ ಘಟಕದ ಸುತ್ತಮುತ್ತ ಕೆ.ಬಿ.ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ಜಯನಗರ, ಸರಸ್ವತಿ ನಗರ, ಶಕ್ತಿ ನಗರ, ಸುಬ್ರಮಣ್ಯ ನಗರ, ಶ್ರೀನಿವಾಸ ನಗರ, ಲೋಕಿಕೆರೆ ಮುಖ್ಯ ರಸ್ತೆ, ಕೈಗಾರಿಕಾ ಪ್ರದೇಶ, ಕೆ.ಟಿ.ಜೆ ನಗರ, ಜಯದೇವ ಸರ್ಕಲ್, ಡಿ.ಸಿ.ಎಂ ‘ಎ’ ‘ಆ’ ಮತ್ತು ‘ಸಿ’ ಬ್ಲಾಕ್, ಪಿ.ಬಿ.59 ರಸ್ತೆ ರಿಲಯನ್ಸ್ ಬಜಾರ್ ಸುತ್ತ, ನಿಟುವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.



