Connect with us

Dvgsuddi Kannada | online news portal | Kannada news online

ದಾವಣಗೆರೆ:  ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ; ಮೇ.20 ರಂದು  ವಾಕ್ ಇನ್ ಇಂಟವ್ರ್ಯೂವ್

ದಾವಣಗೆರೆ

ದಾವಣಗೆರೆ:  ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ; ಮೇ.20 ರಂದು  ವಾಕ್ ಇನ್ ಇಂಟವ್ರ್ಯೂವ್

ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮೇ 20 ರಂದು ಬೆಳಗ್ಗೆ 10 ಗಂಟೆಗೆ “ವಾಕ್ ಇನ್ ಇಂಟವ್ರ್ಯೂವ್” ಆಯೋಜಿಸಲಾಗಿದೆ.

ವಾಕ್ ಇನ್ ಇಂಟವ್ರ್ಯೂವ್‍ನಲ್ಲಿ ಖಾಸಗಿ ಬ್ಯಾಂಕ್ INDUSIND BANK ಸಂಸ್ಥೆ  ಭಾಗವಹಿಸುತ್ತಿದ್ದು, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ಮೇ.20ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್‍ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನದಲ್ಲಿ ಭಾಗವಹಿಸಿ ವಾಕ್ ಇನ್ ಇಂಟವ್ರ್ಯೂವ್‍ನ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08192-259446, 6361550016, 7406323294ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಗಿರೀಶ್ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top