Connect with us

Dvgsuddi Kannada | online news portal | Kannada news online

ದಾವಣಗೆರೆ: ಚೇತನ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜುಗಳಿಗೆ ಹೊಸ ದಾಖಲಾತಿ ಮಾಡಿಕೊಳ್ಳದಂತೆ ನ್ಯಾಯಾಲಯ ಆದೇಶ

ದಾವಣಗೆರೆ

ದಾವಣಗೆರೆ: ಚೇತನ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜುಗಳಿಗೆ ಹೊಸ ದಾಖಲಾತಿ ಮಾಡಿಕೊಳ್ಳದಂತೆ ನ್ಯಾಯಾಲಯ ಆದೇಶ

ದಾವಣಗೆರೆ: ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಚೇತನ ಶಿಕ್ಷಣ ಸಂಸ್ಥೆ  ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸ ದಾಖಲಾತಿ ಮಾಡಿಕೊಳ್ಳದಂತೆ ನ್ಯಾಯಾಲಯದ ಆದೇಶ ನೀಡಿದೆ.

ಬಿಐಇಟಿ ಕಾಲೇಜು ರಸ್ತೆ ಯ ಶ್ರೀ ವೈಷ್ಣವಿ ಚೇತನ ಪದವಿಪೂರ್ವ ಕಾಲೇಜು, ಆಂಜನೇಯ ಬಡಾವಣೆ   ಶ್ರೀ ವೈಷ್ಣವಿ ಚೇತನ ಪದವಿಪೂರ್ವ ಕಾಲೇಜು, ಹರಿಹರದ  ಶ್ರೀ ವಿಜಯ ಚೇತನ ಪದವಿಪೂರ್ವ ಕಾಲೇಜಿನಲ್ಲಿ ಹೊಸ ದಾಖಲಾತಿ ಮಾಡಿಕೊಳ್ಳದಂತೆ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಈ 03 ಕಾಲೇಜುಗಳಲ್ಲಿ ಈಗಾಗಲೇ 2020-21 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಗೆ ದಾಖಲಾತಿ ಹೊಂದಿರುವವರನ್ನು (ಕ್ರಮವಾಗಿ 320, 275, 00 ವಿದ್ಯಾರ್ಥಿಗಳನ್ನು) ಮಾತ್ರ ಮುಂದುವರೆಸಬಹುದಾಗಿರುತ್ತದೆ.ಈ ಮಾಹಿತಿಯನ್ನು ಈ ಮೂಲಕ ವಿದ್ಯಾರ್ಥಿಗಳ/ ಪೋಷಕರ / ಕಾಲೇಜಿನ ಪ್ರಾಚಾರ್ಯರ ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ. ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ಇಲಾಖೆಯು ಜವಾಬ್ದಾರಿಯಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top