ದಾವಣಗೆರೆ; ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಈ ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4.22 ಕೋಟಿ ರು.ಮೌಲ್ಯದ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ.
23 ಸಾವಿರಕ್ಕೂ ಅಧಿಕ ಲೀಟರ್ ಮದ್ಯ. ಇದರ ಅಂದಾಜು ಮೊತ್ತ 2.4 ಕೋಟಿ ರೂ, 94.57 ಲಕ್ಷ ನಗದು, 71 ಸಾವಿರ ಮೌಲ್ಯದ 3.8 ಕೆಜಿ ಗಾಂಜಾ, ಬೆಳ್ಳಿಯ ಸಾಮಾನು, ಹಾಲಿನ ಕ್ಯಾನು, ಕುಕ್ಕರ್, ಪಾತ್ರೆ ಇತ್ಯಾದಿ ಸೇರಿ 84 ಲಕ್ಷ ರೂ. ಮೌಲ್ಯದ ವಸ್ತುಗಳ ವಶಪಡಿಸಲಾಗಿದೆ ಎಂದು ತಿಳಿಸಿದರು.



