ದಾವಣಗೆರೆ: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ 2022-23ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರಿಗೆ ಸೆ.05 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ ಈ ಕೆಳಕಂಡಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರ ಹೆಸರು ಮತ್ತು ವಿಳಾಸ: ಫಯಿಜ್ ಉರ್ ರೆಹಮಾನ್ ಸಹ ಶಿಕ್ಷಕರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕರೆಬಿಳಚಿ, ಚನ್ನಗಿರಿ ತಾಲ್ಲೂಕು. ಅಶ್ವತಕುಮಾರ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೀಲಾನಹಳ್ಳಿ, ದಾವಣಗೆರೆ ಉತ್ತರ ವಲಯ. ನೇಮಾವತಿ ಸಿ.ಎಂ. ಸಹ ಶಿಕ್ಷಕರು ಕರ್ನಾಟಕ ಪ್ರಾಥಮಿಕ ಪಬ್ಲಿಕ್ ಶಾಲೆ ಕುಕ್ಕುವಾಡ, ದಾವಣಗೆರೆ ದಕ್ಷಿಣ ವಲಯ. ಕೆ.ಎನ್.ಸಾವಿತ್ರಮ್ಮ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಜ್ಜಿ, ಹರಿಹರ ತಾಲ್ಲೂಕು. ಶಶಿಕಲಾ ಎಂ, ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವ್ಯಾಸಗೊಂಡನಹಳ್ಳಿ, ಜಗಳೂರು ತಾಲ್ಲೂಕು. ಪ್ರಹ್ಲಾದ್ ಜಿ.ಹೆಚ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಟ್ಯಾಪುರ, ಹೊನ್ನಾಳಿ ತಾಲ್ಲೂಕು. ಸರ್ವಮಂಗಳ ಎಸ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಗೇನಹಳ್ಳಿ, ಹೊನ್ನಾಳಿ/ನ್ಯಾಮತಿ ತಾಲ್ಲೂಕು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರ ಹೆಸರು ಮತ್ತು ವಿಳಾಸ: ತನುಜಾ ಎ, ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆದಿಕೆರೆ, ಚನ್ನಗಿರಿ ತಾಲ್ಲೂಕು. ಪ್ರಕಾಶ ಮಡಿವಾಳ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪುರ, ದಾವಣಗೆರೆ ಉತ್ತರ ವಲಯ. ಪದ್ಮ.ಟಿ ಸಹ ಶಿಕ್ಷಕರು ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮಾಯಕೊಂಡ, ದಾವಣಗೆರೆ ದಕ್ಷಿಣ ವಲಯ. ಮಂಗಳ.ಕೆ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಧೂಳೆಹೊಳೆ, ಹರಿಹರ ತಾಲ್ಲೂಕು. ಬಸವರಾಜ ಬಿ.ಎಸ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲೇಕಲ್ಲು, ಜಗಳೂರು ತಾಲ್ಲೂಕು. ಇಮ್ತಿಯಾಜ್ ಅಹಮದ್ ಖತೀಬ್ ಬ.ಮು.ಶಿ. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮಾವಿನಕೋಟೆ, ಹೊನ್ನಾಳಿ ತಾಲ್ಲೂಕು. ಜಯಲಕ್ಷ್ಮೀ ಜಿ.ಹೆಚ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನ್ನಿಕಟ್ಟೆ, ಹೊನ್ನಾಳಿ/ನ್ಯಾಮತಿ ತಾಲ್ಲೂಕು. ಮಹಾಂತೇಶ ಡಿ ಆರ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೆ.ಹೆಚ್.ಪಟೇಲ್ ನಗರ, ಬಸವಾಪಟ್ಟಣ, ಚನ್ನಗಿರಿ ತಾಲ್ಲೂಕು.
ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರ ಹೆಸರು ಮತ್ತು ವಿಳಾಸ ಪುಂಡಲೀಕ ಎಂ.ಕೆ, ಚಿತ್ರಕಲಾ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಬೆಳಲಗೆರೆ, ಚನ್ನಗಿರಿ ತಾಲ್ಲೂಕು. ವಾಗೀಶ್ ಮುಲ್ಕಿಒಡೆಯರ್ ಸಹ ಶಿಕ್ಷಕರು ಸರ್ಕಾರಿ ಪೌಢಶಾಲೆ ಆವರಗೊಳ್ಳ, ದಾವಣಗೆರೆ ಉತ್ತರ ವಲಯ. ಶಕುಂತಲ ಎಂ.ವಿ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಕುರ್ಕಿ, ದಾವಣಗೆರೆ ದಕ್ಷಿಣ ವಲಯ. ಸುರೇಶ್ ಎಸ್ ಮೂಲಿಮನಿ ಸಹ ಶಿಕ್ಷಕರು ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ) ಮಲೇಬೆನ್ನೂರು, ಹರಿಹರ ತಾಲ್ಲೂಕು. ಮಂಜುನಾಥ ಎಂ.ವಿ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ (ಆರ್.ಎಂ.ಎಸ್.ಎ) ಯರಲಕಟ್ಟೆ, ಜಗಳೂರು ತಾಲ್ಲೂಕು. ಅರುಣಕುಮಾರ್ ಆರ್.ಎಂ ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೆಚ್.ಗೋಪಗೊಂಡನಹಳ್ಳಿ, ಹೊನ್ನಾಳಿ ತಾಲ್ಲೂಕು. ಮಂಜುನಾಥ ಡಿ.ಎಸ್ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಜೀನಹಳ್ಳಿ, ಹೊನ್ನಾಳಿ/ನ್ಯಾಮತಿ ತಾಲ್ಲೂಕು. ಸುಜಾತ.ಬಿ ಮುಖ್ಯ ಶಿಕ್ಷಕರು ಪಂಪಾರೂಢಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಹೊನ್ನೂರು, ದಾವಣಗೆರೆ ಉತ್ತರ ವಲಯ.
ಆಯ್ಕೆಯಾದ ಶಿಕ್ಷಕರಿಗೆ ಸೆ.05 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಆರ್.ತಿಪ್ಪೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ