Connect with us

Dvgsuddi Kannada | online news portal | Kannada news online

ದಾವಣಗೆರೆ ವಿಶ್ವ ತೆಂಗು ದಿನಾಚರಣೆ: ಆದಾಯ, ಆರೋಗ್ಯ, ಆನಂದ ಕೊಡುವ ಕಲ್ಪವೃಕ್ಷ : ಡಾ.ದೇವರಾಜ

ದಾವಣಗೆರೆ

ದಾವಣಗೆರೆ ವಿಶ್ವ ತೆಂಗು ದಿನಾಚರಣೆ: ಆದಾಯ, ಆರೋಗ್ಯ, ಆನಂದ ಕೊಡುವ ಕಲ್ಪವೃಕ್ಷ : ಡಾ.ದೇವರಾಜ

ದಾವಣಗೆರೆ: ತೆಂಗು, ನಾಡಿನ ಎಲ್ಲಾ ಜನರಿಗೆ ಅತ್ಯಂತ ಅಗತ್ಯ ಹಾಗೂ ಉಪಯುಕ್ತ ಬೆಳೆಯಾಗಿದೆ.ಮಾನವನಿಗೆ ಆದಾಯ, ಆರೋಗ್ಯ ಮತ್ತು ಆನಂದವನ್ನು ನೀಡುವ ವಿಶೇಷ ಕಲ್ಪವೃಕ್ಷವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಅಭಿಪ್ರಾಯಪಟ್ಟರು.

 

ಉಜಪ್ಪ ವಡೆಯರಹಳ್ಳಿ ಗ್ರಾಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದವತಿಯಿಂದ ವಿಶ್ವ ತೆಂಗು ದಿನಾಚರಣೆ ಆಚರಿಸಲಾಯಿತು. ಗ್ರಾಮದ ಯುವಕ ಮಂಡಳಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ತೆಂಗು ದಿನಾಚರಣೆ 2009 ರಲ್ಲಿ ಆರಂಭಗೊಂಡ ಏಷ್ಯಾ-ಪೆಸಿಫಿಕ್ ತೆಂಗು ಸಂಸ್ಥೆ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಇದರೊಂದಿಗೆ ತೆಂಗಿನ ಮೌಲ್ಯವರ್ಧನೆಯಿಂದ (ಕೊಬ್ಬರಿ ಎಣ್ಣೆ, ಮಿಠಾಯಿ ಮತ್ತು ವರ್ಜಿನ್ ಕೊಬ್ಬರಿ ಎಣ್ಣೆ) ಹೆಚ್ಚು ಆದಾಯಗಳಿಸಲು ರೈತ ಆಸಕ್ತ ಗುಂಪುಗಳು ಪ್ರಯತ್ನಿಸಬಹುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮದ ರೈತರ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ನೀಡಿ ಅನೇಕ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಸೂಚಿಸಲಾಯಿತು.ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಎಂ.ಜಿ ಹಾಗೂ ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ.ಜಿ ರೈತರನ್ನು ಉದ್ದೇಶಿಸಿ ಸಲಹೆ ಸೂಚನೆಗಳನ್ನು ನೀಡಿದರು..

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top