ದಾವಣಗೆರೆ: 2025-26 2020-21. 2021-22, 2022-23, 2023-24. 2024-25ರ ಸಾಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿರುವ ಕೆಲವೊಂದು ವಿದ್ಯಾರ್ಥಿಗಳಿಗೆ ಈ ಕೆಳಕಂಡ ತಾಂತ್ರಿಕ ಕಾರಣಗಳಿಂದ ವಿದ್ಯಾರ್ಥಿವೇತನ ಶುಲ್ಕ ಮರುಪಾವತಿ (Fee refund) ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.
ದಾವಣಗೆರೆ: ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ಅರ್ಜಿ ಆಹ್ವಾನ
ಶುಲ್ಕ ಮರುಪಾವತಿ ತಡೆಯಲು ಕಾರಣ ಏನು ..?
ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಕೊಳ್ಳದೆ ಇರುವುದು, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತಾಂಶದಲ್ಲಿ ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ನಮೂದಿಸಿರುವ ಹೆಸರಿಗೂ ವ್ಯತ್ಯಾಸವಿರುವುದು, ಕೌನ್ಸಿಲ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೌನ್ಸಿಲಿಂಗ್ ದತ್ತಾಂಶ ನಮೂದಿಸದೇ ಇರುವುದು, ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ವರ್ಷದ ದತ್ತಾಂಶವನ್ನು ವಿಶ್ವವಿದ್ಯಾಲಯಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದೊಂದಿಗೆ ಹಂಚಿಕೊಳ್ಳದೆ ಇರುವುದು.
ದಾವಣಗೆರೆ: ಪತಿ ಬಿಟ್ಟು ಪ್ರಿಯಕರ ಜೊತೆ ಪರಾರಿಯಾಗಿ ಪತಿ, ಸೋದರ ಮಾವ ಸಾವಿಗೆ ಕಾರಣಳಾದ ಮಹಿಳೆ ಅರೆಸ್ಟ್
ಜ.30 ಕೊನೆ ದಿನ
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಮಾಹಿತಿಯನ್ನು ಅಪ್‌ಡೇಟ್ ಮಾಡಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ವಿದ್ಯಾರ್ಥಿಗಳ ಲಾಗಿನ್, ತಾಲ್ಲೂಕು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ. ಜನವರಿ 30 ರೊಳಗಾಗಿ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ದಾವಣಗೆರೆ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ; 80 ಸಾವಿರ ಮೌಲ್ಯದ ಗಾಂಜಾ, ಬೈಕ್ ವಶ



