ದಾವಣಗೆರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಶೇ 92.55ರಷ್ಟು ಫಲಿತಾಂಶ ಬಂದಿದ್ದು, ಎ ಗ್ರೇಡ್ ಪಡೆದುಕೊಂಡಿದೆ. ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿಯ ಉರ್ದು ಸರ್ಕಾರಿ ಪ್ರೌಢಶಾಲೆಯ ಆಲಿಯಾ ಫಿರ್ದೋಸ್, ಹೊನ್ನಾಳಿ ತಾಲ್ಲೂಕಿನ ಸ್ಟೆಲ್ಲಾ ಮೇರಿಸ್ ಹೈಸ್ಕೂಲ್‌ನ ಮೃದುಲಾ ಆರ್.ಹಾಗೂ ತೇಜಸ್ವಿನಿ ಎನ್.ಜಿ. ಅವರು 625ಕ್ಕೆ 624 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ.
2021ನೇ ಸಾಲಿನಲ್ಲಿ ಕೊರೊನಾ ದಿಂದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿತ್ತು. 2020ರಲ್ಲಿ ಜಿಲ್ಲೆಗೆ ಶೇ 78.90ರಷ್ಟು ಫಲಿತಾಂಶ ಬಮದಿತ್ತು. ಈ ವರ್ಷ ಶೇ 92.55ರಷ್ಟು ಫಲಿತಾಂಶ ಬಂದಿದ್ದು, ಕಳೆದ 2021 ವರ್ಷಕ್ಕೆ ಹೊಲಿಸಿದರೆ ಶೇ 13.65ರಷ್ಟು ಏರಿಕೆಯಾಗಿದೆ. ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕು ಶೇ. 90.38 ಫಲಿತಾಂಶ ಪಡೆದಿದು ಪ್ರಥಮ ಸ್ಥಾನದಲ್ಲಿಸೆ. ದಾವಣಗೆರೆ ದಕ್ಷಿಣ ವಲಯವು ಕೊನೆಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 21,518 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಇವರ ಪೈಕಿ 19,915 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 10,460 ಬಾಲಕರ ಪೈಕಿ 9,439 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾದ 11,058 ವಿದ್ಯಾರ್ಥಿನಿಯರ ಪೈಕಿ 10,476 ಬಾಲಕಿಯರು ಉತ್ತೀರ್ಣರಾಗಿದ್ದಾರೆ.



