Connect with us

Dvgsuddi Kannada | online news portal | Kannada news online

ದಾವಣಗೆರೆ ಎಸ್ಸೆಸ್ಸೆಲ್ಸಿ ಫಲಿತಾಂಶ; ಜಗಳೂರು ಪ್ರಥಮ ಸ್ಥಾನ- ಹೊನ್ನಾಳಿಗೆ ಕೊನೆ ಸ್ಥಾನ

ದಾವಣಗೆರೆ

ದಾವಣಗೆರೆ ಎಸ್ಸೆಸ್ಸೆಲ್ಸಿ ಫಲಿತಾಂಶ; ಜಗಳೂರು ಪ್ರಥಮ ಸ್ಥಾನ- ಹೊನ್ನಾಳಿಗೆ ಕೊನೆ ಸ್ಥಾನ

ದಾವಣಗೆರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಗೆ ಶೇ.90.12ರಷ್ಟು ಫಲಿತಾ೦ಶ ಬಂದಿದೆ. ಕಳೆದ ಬಾರಿ 10ನೇ ಸ್ಥಾನದಲ್ಲಿ ಇದ್ದ ದಾವಣಗೆರೆ ಜಿಲ್ಲೆ, ಈ ಸಲ 14ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕು ಪ್ರಥಮ ಸ್ಥಾನ ಪಡೆದರೆ, ಹೊನ್ನಾಳಿ ತಾಲ್ಲೂಕು ಕೊನೆ ಸ್ಥಾನದಲ್ಲಿದೆ.

ಜಿಲ್ಲೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 20,337 ಮಕ್ಕಳಲ್ಲಿ 18,327ಮಕ್ಕಳುತೇರ್ಗಡೆಯಾಗಿ,ಶೇ.90.12 ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ 9845 ಬಾಲಕರಲ್ಲಿ 8652 ಮಂದಿ ಉತ್ತೀರ್ಣರಾದರೆ, 10492 ಬಾಲಕಿಯರಲ್ಲಿ 9675 ಮಕ್ಕಳು ಉತ್ತೀರ್ಣರಾಗಿದ್ದಾರೆ. ಬಾಲಕರ ಫಲಿತಾಂಶ ಶೇ.87.88ರಷ್ಟು ಇದ್ದರೆ, ಬಾಲಕಿಯರ ಫಲಿತಾಂಶ ಶೇ.92.21ರಷ್ಟು ಇದೆ. ಎ೦ದಿನ೦ತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ

 • ವಲಯವಾರು ಫಲಿತಾಂಶ
 1. ಜಗಳೂರು -ಶೇ.96.48
 2. ದಾವಣಗೆರೆ ಉತ್ತರ-ಶೇ.92.85
 3. ಚನ್ನಗಿರಿ-ಶೇ.92.48
 4. ಹರಿಹರ-ಶೇ.90.12
 5. ದಾವಣಗೆರೆ ದಕ್ಷಿಣ-ಶೇ. 88.96
 6. ಹೊನ್ನಾಳಿ ಶೇ.80.57

 

 • ಜಗಳೂರು ತಾಲೂಕಿನ 2242 ಮಕ್ಕಳಲ್ಲಿ
  2163 ಮಕ್ಕಳು ತೇರ್ಗಡೆಯಾಗಿದ್ದು,
  ಶೇ.95.48 ಫಲಿತಾಂಶ ಬಂದಿದೆ. 1117
  ಬಾಲಕರ ಪೈಕಿ 1067 ಬಾಲಕರು
  ತೇರ್ಗಡೆಯಾಗಿ, ಶೇ.95.52 ಫಲಿತಾಂಶ
  ಬಂದರೆ, 1125 ಬಾಲಕಿಯರ ಪೈಕಿ 1096
  ಬಾಲಕಿಯರು ಉತ್ತೀರ್ಣರಾಗಿ ಒಟ್ಟು
  ಶೇ.96.48 ಫಲಿತಾಂಶ ಬಂದಿದೆ.
 • ದಾವಣಗೆರೆ ಉತ್ತರದಲ್ಲಿ 3411 ಮಕ್ಕಳಲ್ಲಿ
  3167 ಮಕ್ಕಳು ತೇರ್ಗಡೆಯಾಗಿದ್ದಾರೆ. 1660ಬಾಲಕರ ಪೈಕಿ 1504 ಜನ ಉತ್ತೀರ್ಣರಾಗಿಶೇ.90.60 ರಷ್ಟು, 1751 ಬಾಲಕಿಯರಲ್ಲಿ1663 ಬಾಲಕಿಯರು ತೇರ್ಗಡೆಯಾಗಿ,ಶೇ.84.97ರಷ್ಟು ಸೇರಿ ಒಟ್ಟು ಶೇ.92.85ಫಲಿತಾಂಶ ತಾಲೂಕಿಗೆ ಲಭಿಸಿದೆ.
 • ಚನ್ನಗಿರಿಯಲ್ಲಿ 3655 ಮಕ್ಕಳ ಪೈಕಿ 1719
  ಬಾಲಕರ ಪೈಕಿ ಶೇ.90.52ರಂತೆ 1556 ಜನ,
  1936 ಬಾಲಕಿಯರ ಪೈಕಿ ಶೇ.94.21ರಂತೆ
  1824 ಜನ ಸೇರಿದಂತೆ ಒಟ್ಟು 3380 ಮಕ್ಕಳುತೇರ್ಗಡೆಯಾಗಿದ್ದು, ತಾಲೂಕಿಗೆ ಶೇ.92.48ಫಲಿತಾಂಶ ಲಭಿಸಿದೆ.
 • ಹರಿಹರದಲ್ಲಿ 3006 ವಿದ್ಯಾರ್ಥಿಗಳ ಪೈಕಿ
  2709 ಉತ್ತೀರ್ಣರಾಗಿದ್ದು, 1497
  ಬಾಲಕರ ಪೈಕಿ 1308 ಜನ
  ಶೇ.87.37ರಂತೆ, 1509 ಬಾಲಕಿಯರ ಪೈಕಿ
  1401 ಜನ ಶೇ.92.84ರಂತೆ
  ಉತ್ತೀರ್ಣರಾಗಿದ್ದು, ತಾಲೂಕಿಗೆ ಒಟ್ಟು
  90.12 ಫಲಿತಾಂಶ ಲಭಿಸಿದೆ.
 • ದಾವಣಗೆರೆ ದಕ್ಷಿಣದ 5289 ಮಕ್ಕಳ ಪೈಕಿ
  4705 ಮಕ್ಕಳು ತೇರ್ಗಡೆಯಾಗಿ, ಶೇ.88.96
  ಫಲಿತಾಂಶ ಬಂದಿದೆ. 2539 ಬಾಲಕರ ಪೈಕಿ
  2230 ಬಾಲಕರು ತೇರ್ಗಡೆಯಾಗಿ
  ಶೇ.87.83 ಹಾಗೂ 2750 ಬಾಲಕಿಯರ
  ಪೈಕಿ 2475 ಬಾಲಕಿಯರು ತೇರ್ಗಡೆಯಾಗಿ
  ಶೇ.90.00 ಫಲಿತಾಂಶ ಬ೦ದಿದೆ.
 • ಹೊನ್ನಾಳಿ ತಾಲೂಕಿನಲ್ಲಿ 2734 ಮಕ್ಕಳ ಪೈಕಿ
  2203 ಮಕ್ಕಳು ಉತ್ತೀರ್ಣರಾಗಿ, ಶೇ.80.58
  ಫಲಿತಾಂಶ ಬಂದಿದೆ. 1313 ಬಾಲಕರ ಪೈಕಿ
  1216 ಮಕ್ಕಳು ತೇರ್ಗಡೆಯಾಗಿ
  ಶೇ.75.17ರಷ್ಟು, 1421 ಬಾಲಕಿಯರ ಪೈಕಿ
  1216 ಬಾಲಕಿಯರು ತೇರ್ಗಡೆಯಾಗಿ,
  ಶೇ.85.57 ಫಲಿತಾಂಶ ಬಂದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top