ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2022-23ನೇ ಸಾಲಿನ ಎಸ್‌ಎಸ್‌ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು,ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು ಶೇ. 83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಚಿತ್ರದುರ್ಗ ಜಿಲ್ಲೆ ಶೇ. 96.08ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದ್ದು, ಹಾಸನ ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. ದಾವಣಗೆರೆ- ಶೇ.90.43ರಷ್ಟು ಅಂಕದೊಂದಿಗೆ 14ನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಪರೀಕ್ಷೆ ಬರೆದ ಒಟ್ಟು 8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 3,41,108 ಬಾಲಕರು ಹಾಗೂ 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ. karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
- ಎಸ್ ಎಸ್ ಎಲ್ ಸಿಯಲ್ಲಿ ಟಾಪರ್ಸ್ ಆದ ವಿದ್ಯಾರ್ಥಿಗಳು:
- 625 – ಅನುಪಮ ಶ್ರೀಶೈಲ್ ಹಿರಿಹೋಳಿ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೌದತ್ತಿ, ಬೆಳಗಾವಿ ಜಿಲ್ಲೆ
- 625- ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್, ಆಕ್ಸ್‌ಫರ್ಡ್ ಇಂಗ್ಲೀಷ್ ಹೈಸ್ಕೂಲ್, ಮುದ್ದೆಬೀಹಾಳ
- 625 – ಯಶಸ್ಸ್ ಗೌಡ, ಬಾಲಗಂಗಾಧರ ಸ್ವಾಮಿ ಹೈಸ್ಕೂಲ್ ಚಿಕ್ಕಬಳ್ಳಾಪುರ
- 625- ಭೂಮಿಕ ಪೈ, ನ್ಯೂ ಮೆಕಾಲೆ ಇಂಗ್ಲೀಷ್ ಸ್ಕೂಲ್, ಹೊಸೂರು ರೋಡ್ , ಬೆಂಗಳೂರು
ಜಿಲ್ಲಾವಾರು ಫಲಿತಾಂಶ
- ಚಿತ್ರದುರ್ಗ -ಶೇ.96.8
- ಮಂಡ್ಯ-ಶೇ.96.74
- ಹಾಸನ-ಶೇ.96.68
- ಬೆಂಗಳೂರು ಗ್ರಾಮಾಂತರ-ಶೇ.96.48
- ಚಿಕ್ಕಬಳ್ಳಾಪುರ-ಶೇ.96.15
- ಕೋಲಾರ-ಶೇ.94.6
- ಚಾಮರಾಜನಗರ -ಶೇ.,94.32
- ಮಧುಗಿರಿ- ಶೇ.93.23
- ಕೊಡಗು-ಶೇ.93.19
- ವಿಜಯನಗರ- ಶೇ.91.41
- ವಿಜಯಪುರ- ಶೇ. 91.23
- ಚಿಕ್ಕೋಡಿ-91.07
- ಉತ್ತರಕನ್ನಡ- ಶೇ.90.53
- ದಾವಣಗೆರೆ- ಶೇ.90.43
- ಕೊಪ್ಪಳ- ಶೇ.90.27
- ಮೈಸೂರು ಜಿಲ್ಲೆ- ಶೇ.89.75
- ಚಿಕ್ಕಮಗಳೂರು-ಶೇ.89.69
- ಉಡುಪಿ- ಶೇ. 89.49
- ದಕ್ಷಿಣ ಕನ್ನಡ- ಶೇ. 89.47
- ತುಮಕೂರು- ಶೇ. 89.43
- ರಾಮನಗರ- ಶೇ. 89.42
- ಹಾವೇರಿ ಶೇ.89.11
- ಶಿರಸಿ- ಶೇ.87.39
- ಧಾರವಾಡ-ಶೇ.86.55
- ಗದಗ-ಶೇ.86.51
- ಬೆಳಗಾವಿ-ಶೇ.85.85
- ಬಾಗಲಕೋಟೆ-ಶೇ.85.14
- ಕಲಬುರಗಿ- ಶೇ.84.51
- ಶಿವಮೊಗ್ಗ-ಶೇ.84.04
- ರಾಯಚೂರು- ಶೇ. 84.02
- ಬಳ್ಳಾರಿ- ಶೇ.81.54
- ಬೆಂಗಳೂರು ಉತ್ತರ ಶೇ.80.93
- ಬೆಂಗಳೂರು ದಕ್ಷಿಣ ಶೇ.78.95
- ಬೆಂಗಳೂರು ಪಶ್ಚಿಮ ಶೇ.80.93
- ಬೀದರ್ ಶೇ. 78.73
- ಯಾದಗಿರಿಗೆ ಕೊನೆಯ ಸ್ಥಾನ- ಶೇ.75.4