Connect with us

Dvgsuddi Kannada | online news portal | Kannada news online

SSLC ಫಲಿತಾಂಶ; ದಾವಣಗೆರೆ ಜಿಲ್ಲೆಗೆ 14ನೇ ಸ್ಥಾನ: ಶೇ. 90.43ರಷ್ಟು ಫಲಿತಾಂಶ

ದಾವಣಗೆರೆ

SSLC ಫಲಿತಾಂಶ; ದಾವಣಗೆರೆ ಜಿಲ್ಲೆಗೆ 14ನೇ ಸ್ಥಾನ: ಶೇ. 90.43ರಷ್ಟು ಫಲಿತಾಂಶ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ  2022-23ನೇ ಸಾಲಿನ ಎಸ್‌ಎಸ್‌ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು,ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು ಶೇ. 83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿ ಚಿತ್ರದುರ್ಗ ಜಿಲ್ಲೆ ಶೇ. 96.08ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದ್ದು, ಹಾಸನ ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. ದಾವಣಗೆರೆ- ಶೇ.90.43ರಷ್ಟು ಅಂಕದೊಂದಿಗೆ 14ನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

ಪರೀಕ್ಷೆ ಬರೆದ ಒಟ್ಟು 8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು 3,41,108 ಬಾಲಕರು ಹಾಗೂ 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ. karresults.nic.in ವೆಬ್​​​ಸೈಟ್​ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

  • ಎಸ್‌ ಎಸ್‌ ಎಲ್‌ ಸಿಯಲ್ಲಿ ಟಾಪರ್ಸ್‌ ಆದ ವಿದ್ಯಾರ್ಥಿಗಳು:
  • 625 – ಅನುಪಮ ಶ್ರೀಶೈಲ್ ಹಿರಿಹೋಳಿ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೌದತ್ತಿ, ಬೆಳಗಾವಿ ಜಿಲ್ಲೆ
  • 625- ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್, ಆಕ್ಸ್‌ಫರ್ಡ್‌ ಇಂಗ್ಲೀಷ್‌ ಹೈಸ್ಕೂಲ್, ಮುದ್ದೆಬೀಹಾಳ
  • 625 – ಯಶಸ್ಸ್ ಗೌಡ, ಬಾಲಗಂಗಾಧರ ಸ್ವಾಮಿ ಹೈಸ್ಕೂಲ್ ಚಿಕ್ಕಬಳ್ಳಾಪುರ
  • 625- ಭೂಮಿಕ ಪೈ, ನ್ಯೂ ಮೆಕಾಲೆ ಇಂಗ್ಲೀಷ್ ಸ್ಕೂಲ್, ಹೊಸೂರು ರೋಡ್ , ಬೆಂಗಳೂರು

ಜಿಲ್ಲಾವಾರು ಫಲಿತಾಂಶ

  1. ಚಿತ್ರದುರ್ಗ -ಶೇ.96.8
  2. ಮಂಡ್ಯ-ಶೇ.96.74
  3. ಹಾಸನ-ಶೇ.96.68
  4. ಬೆಂಗಳೂರು ಗ್ರಾಮಾಂತರ-ಶೇ.96.48
  5. ಚಿಕ್ಕಬಳ್ಳಾಪುರ-ಶೇ.96.15
  6. ಕೋಲಾರ-ಶೇ.94.6
  7. ಚಾಮರಾಜನಗರ -ಶೇ.,94.32
  8. ಮಧುಗಿರಿ- ಶೇ.93.23
  9. ಕೊಡಗು-ಶೇ.93.19
  10. ವಿಜಯನಗರ- ಶೇ.91.41
  11. ವಿಜಯಪುರ- ಶೇ. 91.23
  12. ಚಿಕ್ಕೋಡಿ-91.07
  13. ಉತ್ತರಕನ್ನಡ- ಶೇ.90.53
  14. ದಾವಣಗೆರೆ- ಶೇ.90.43
  15. ಕೊಪ್ಪಳ- ಶೇ.90.27
  16. ಮೈಸೂರು ಜಿಲ್ಲೆ- ಶೇ.89.75
  17. ಚಿಕ್ಕಮಗಳೂರು-ಶೇ.89.69
  18. ಉಡುಪಿ- ಶೇ. 89.49
  19. ದಕ್ಷಿಣ ಕನ್ನಡ- ಶೇ. 89.47
  20. ತುಮಕೂರು- ಶೇ. 89.43
  21. ರಾಮನಗರ- ಶೇ. 89.42
  22. ಹಾವೇರಿ ಶೇ.89.11
  23. ಶಿರಸಿ- ಶೇ.87.39
  24. ಧಾರವಾಡ-ಶೇ.86.55
  25. ಗದಗ-ಶೇ.86.51
  26. ಬೆಳಗಾವಿ-ಶೇ.85.85
  27. ಬಾಗಲಕೋಟೆ-ಶೇ.85.14
  28. ಕಲಬುರಗಿ- ಶೇ.84.51
  29. ಶಿವಮೊಗ್ಗ-ಶೇ.84.04
  30. ರಾಯಚೂರು- ಶೇ. 84.02
  31. ಬಳ್ಳಾರಿ- ಶೇ.81.54
  32. ಬೆಂಗಳೂರು ಉತ್ತರ ಶೇ.80.93
  33. ಬೆಂಗಳೂರು ದಕ್ಷಿಣ ಶೇ.78.95
  34. ಬೆಂಗಳೂರು ಪಶ್ಚಿಮ ಶೇ.80.93
  35. ಬೀದರ್ ಶೇ. 78.73
  36. ಯಾದಗಿರಿಗೆ ಕೊನೆಯ ಸ್ಥಾನ- ಶೇ.75.4

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top