ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ 10 ರಿಂದ 17 ವರ್ಷ ವಯೋಮಿತಿಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಹಸಮಯ ಬೇಸಿಗೆ ಶಿಬಿರವನ್ನು ಏಪ್ರಿಲ್ ಮತ್ತು ಮೇ 2024 ರ ಮಾಹೆಗಳಲ್ಲಿ ಆಯೋಜಿಸಲಾಗಿದೆ.
ಸಾಹಸಮಯ ಬೇಸಿಗೆ ತರಬೇತಿ ಶಿಬಿರದ ಕುರಿತು ಹೆಚ್ಚಿನ ಮಾಹಿತಿಯನ್ನು gethnaa.org ವೆಬ್‍ಸೈಟ್ ಮೂಲಕ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ವಾಯು ಸಾಹಸ ಕ್ರೀಡಾ ಶಿಬಿರ ಮತ್ತು ಶಿಲಾರೋಹಣ ಶಿಬಿರ – ರಾಜೇಂದ್ರ ಹಾಸಬಾವಿ ಮೊ.ಸಂ: 94480 38220, ರಿವರ್‍ರ್ಯಾಪ್ಟಿಂಗ್ ಮತ್ತು ಕಯಾಕಿಂಗ್ ಕೋರ್ಸ್ ದಿನೇಶ್ ಎಸ್ ಸುವರ್ಣ ಮೊ.ಸಂ: 9731362617, ಸಾಹಸ ಮತ್ತು ಪ್ರಕೃತಿ ಅಧ್ಯಯನ ಶಿಬಿರ ಮುನಿರಾಜು ಆರ್ ಮೊ.ಸಂ: 94803 83764, ಜಲ ಸಾಹಸ ಕ್ರೀಡಾ ಶಿಬಿರ ಶಬ್ಬೀರ್.ಎಫ್ ಮೊ.ಸಂ: 89715 53337, ವಿಂಡ್ ಸರ್ಫಿಂಗ್& ಸೈಲಿಂಗ್ ಶಿಬಿರ ಮೊ.ಸಂ: 7760365079 ಇವರನ್ನು ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.



