Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಜ್ಯ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಜಿಲ್ಲೆಯ ಐವರು ಕ್ರೀಡಾಪಟುಗಳು ಆಯ್ಕೆ

ದಾವಣಗೆರೆ

ದಾವಣಗೆರೆ: ರಾಜ್ಯ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಜಿಲ್ಲೆಯ ಐವರು ಕ್ರೀಡಾಪಟುಗಳು ಆಯ್ಕೆ

ದಾವಣಗೆರೆ: ಜೂ.02 ರಿಂದ ಜೂ.06 ರವರೆಗೆ ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ಕ್ರಿಡಾಂಗಣದಲ್ಲಿ ನಡೆಯುವ ಅಖಿಲ ಭಾರತ ವೃತ್ತಿಪರ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯ  KSKKA XII ತಂಡಕ್ಕೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳಾದ ಅರ್ಜುನ, ವಿರೇಶ್ ಮತ್ತು ರಾಜ್ಯ PRESIDENT’S XII ತಂಡಕ್ಕೆ ವೇಣುಗೋಪಾಲ್ ಎಸ್, ಆಸೀಫ್ ಕುನ್ನೂರ ಮತ್ತು ಮದನ್  ಆಯ್ಕೆಯಾಗಿದ್ದಾರೆ.

ಈ ಕ್ರೀಡಾಪಟುಗಳಿಗೆ ಇಲಾಖೆಯ ಖೋ-ಖೋ ತರಬೇತುದಾರರಾದ ಜೆ.ರಾಮಲಿಂಗಪ್ಪ ಇವರು ತರಬೇತಿ ನೀಡುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳಿಗೆ ಸಹಾಯಕ ನಿರ್ದೇಶಕರಾದ ಸುಚೇತಾ ಎಂ ನೆಲವಗಿ, ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top