ದಾವಣಗೆರೆ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ 19 ವರ್ಷದೊಳಗಿನ ರಾಜ್ಯ ಮಹಿಳಾ ಏಕದಿನ ತಂಡಕ್ಕೆ ದಾವಣಗೆರೆಯ ರಕ್ಷಿತಾ ನಾಯಕ ಆಯ್ಕೆಯಾಗಿದ್ದಾರೆ.
ರಕ್ಷಿತಾ ನಾಯಕ ನಗರದ ಎವಿಕೆ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದಾರೆ. ಚನ್ನೈನಲ್ಲಿ ಡಿ.7ರಿಂದ 14ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಲೀಗ್ ನಲ್ಲಿ ಜಯಿಸಿದ ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿವೆ.ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಗುಜರಾತ್, ಜಾರ್ಖಂಡ್ , ಮಣಿ ಪುರ ತಂಡಗಳು ಭಾಗವಹಿಸಲಿವೆ.