Connect with us

Dvgsuddi Kannada | online news portal | Kannada news online

ದಾವಣಗೆರೆ; ಏ.16 ರಂದು ರಾಜ್ಯ ಮಟ್ಟದ ಗಣಿತ, ವಿಜ್ಞಾನ ಕ್ವಿಜ್ ಸ್ಪರ್ಧೆ, 25 ಸಾವಿರ ಪ್ರಥಮ ಬಹುಮಾನ..!

ದಾವಣಗೆರೆ

ದಾವಣಗೆರೆ; ಏ.16 ರಂದು ರಾಜ್ಯ ಮಟ್ಟದ ಗಣಿತ, ವಿಜ್ಞಾನ ಕ್ವಿಜ್ ಸ್ಪರ್ಧೆ, 25 ಸಾವಿರ ಪ್ರಥಮ ಬಹುಮಾನ..!

ದಾವಣಗೆರೆ; ಶಾಲಾ‌‌ ಮಕ್ಕಳಿಗೆ ರಾಜ್ಯ ಮಟ್ಟದ ಗಣಿತ, ವಿಜ್ಞಾನ ಕ್ವಿಜ್ ಸ್ಪರ್ಧೆ, 25 ಸಾವಿರ ಪ್ರಥಮ ಬಹುಮಾನ..!ದಾವಣಗೆರೆ: ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್. ಶಿವಣ್ಣ ಅವರ ಗೌರವಾರ್ಥ ಏಪ್ರಿಲ್‌ 16ರಂದು ಎಂಎಸ್‌ಎಸ್ ಕ್ವಿಜ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ 25ಸಾವಿರ, ದ್ವಿತೀಯ15‌ಸಾವಿರ ಮತ್ತು ತೃತೀಯ 10 ಸಾವಿರ ನಗದು ಬಹುಮಾನ ಹಾಗೂ ‌ಪ್ರಶಸ್ತಿ ಫಲಕ ನೀಡಲಾಗುವುದು. 10 ಸಮಾಧಾನಕರ 1 ಸಾವಿರ ಬಹುಮಾನ ಮತ್ತು 1000 ವಿದ್ಯಾರ್ಥಿಗಳಿಗೆ ಮೆಡಲ್‌ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಿ.ಎಸ್.ಜಯಂತ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 9 ನೇ ವರ್ಷಗಳಿಂದ ರಾಜ್ಯಮಟ್ಟದ ಸ್ಪರ್ಧೆ ‌ಇದಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. 10ನೇ ತರಗತಿಯ ಗಣಿತ ಹಾಗೂ ವಿಜ್ಞಾನ ಪಠ್ಯಕ್ರಮ ಆಧರಿಸಿ ಪ್ರಶ್ನೆ ನೀಡಲಾಗುವುದು. ಸ್ಪರ್ಧೆ ಲಿಖಿತ ರೂಪದಲ್ಲಿ ನಡೆಯಲಿದೆ. ಬಹು ಆಯ್ಕೆಯ 60 ಪ್ರಶ್ನೆಗಳು ಇರಲಿವೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಬೇರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇದ್ದು, ಅಂದು ಬೆಳಿಗ್ಗೆ 9ರಿಂದ 10.30ರವರೆಗೆ ರೈಲು ನಿಲ್ದಾಣ, ಬಸ್ ನಿಲ್ದಾಣಗಳಿಂದ ದೂರದೂರಿನ ವಿದ್ಯಾರ್ಥಿಗಳನ್ನು ಕರೆತರಲು ಸಿದ್ಧಗಂಗಾ ಶಾಲೆಯ ವಾಹನಗಳ ವ್ಯವಸ್ಥೆ ಮಾಡಲಾಗಿದೆ.ವಿದ್ಯಾರ್ಥಿಗಳು ‌8073054295 ನಂಬರ್‌ಗೆ ಹೆಸರು ಹಾಗೂ ಶಾಲೆಯ ಹೆಸರನ್ನು ವಾಟ್ಸ್‌ಆಯಪ್‌ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top