ದಾವಣಗೆರೆ: ಭಾರತ ದೇಶದಾದ್ಯಂತ ಇರುವ 33 ಸೈನಿಕ ಶಾಲೆಗಳಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 023-24 ರ ಶೈಕ್ಷಣಿಕ ವರ್ಷಕ್ಕಾಗಿ ದಾಖಲು ಹೊಂದಲು ಎಐಎಸ್‍ಎಸ್‍ಇಇ-2023 ಪ್ರವೇಶ ಪರೀಕ್ಷೆ ಏರ್ಪಡಿಸಿದ್ದು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸೈನಿಕ ಶಾಲೆಗಳು ಇಂಗ್ಲೀಷ್ ಮಾಧ್ಯಮ ವಸತಿ ಶಾಲೆಗಳಾಗಿ ಸಿಬಿಎಸ್‍ಇ ಅಂಗಸಂಸ್ಥೆಗಳಾಗಿವೆ. ಅಲ್ಲದೆ ಸೈನಿಕ ಶಾಲಾ ಸೊಸೈಟಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಈ ಶಾಲೆಗಳು ಅಧಿಕಾರಿಗಳನ್ನಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಮತ್ತಿತರೆ ಟ್ರೈನಿಂಗ್ ಅಕಾಡೆಮಿಗಳಿಗಾಗಿ ಅಭ್ಯರ್ಥಿಗಳನ್ನು ತಯಾರು ಮಾಡಲಿವೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, https://aissee.nta.nic.in ಈ ವೆಬ್‍ಸೈಟ್‍ನಲ್ಲಿ ನ.30 ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಪರೀಕ್ಷಾ ಶುಲ್ಕವನ್ನು ಆನ್‍ಲೈನ್ ಮೂಲಕ ಪೇಮೆಂಟ್ ಗೇಟ್‍ವೇಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್‍ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ಮೂಲಕ ಪಾವತಿಸಬಹುದಾಗಿದೆ.
ಎಐಎಸ್‍ಎಸ್‍ಇಇ-2023 ಪರೀಕ್ಷೆಗಾಗಿ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ವಿವರವಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡಿರಬೇಕು. ಪ್ರವೇಶ ಪರೀಕ್ಷೆಯು 2023ರ ಜ.08 ರಂದು ಓಎಮ್‍ಆರ್ ಆಧಾರಿತ ಮಾದರಿಯಲ್ಲಿ ನಡೆಸಲಾಗುವುದು. ಪ್ರಶ್ನೆ ಪತ್ರಿಕೆಯು ಬಹು ಆಯ್ಕೆ ಪ್ರಶ್ನೆ ಮಾದರಿ ಒಳಗೊಂಡಿರುತ್ತದೆ. 6ನೇ ತರಗತಿಯಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಎಲ್ಲಾ ಸೈನಿಕ ಶಾಲೆಗಳಲ್ಲಿ ಪ್ರವೇಶ ತೆರೆದಿದ್ದು, 6ನೇ ತರಗತಿಗೆ ಅರ್ಹತೆ ಹೊಂದಲು ಅಭ್ಯರ್ಥಿಗಳ ವಯೋಮಿತಿ 31.03.2023 ರಂತೆ 12 ವರ್ಷಗಳ ಒಳಗೆ ಇರಬೇಕು.
9ನೇ ತರಗತಿಗೆ ಪ್ರವೇಶ ಹೊಂದಲು ವಯೋಮಿತಿ 31.03.2023 ರಂತೆ 13 ಹಾಗೂ 15 ವರ್ಷಗಳ ನಡುವೆ ಇರಬೇಕು ಹಾಗೂ ಪ್ರವೇಶ ಸಮಯದಲ್ಲಿ ಮಾನ್ಯತೆ ಹೊಂದಿರುವ ಶಾಲೆಯಿಂದ 8ನೇ ತರಗತಿ ತೇರ್ಗಡೆ ಹೊಂದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವು ರೂ.500 ಇದ್ದು, ಇತರರರಿಗೆ ರೂ.650 ಇರುತ್ತದೆ.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲಾವಧಿ, ಮಾಧ್ಯಮ, ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ ಸೀಟುಗಳ ಮೀಸಲು, ಪರೀಕ್ಷಾ ನಗರಗಳು ಹಾಗೂ ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳು ಹಾಗೂ ಇತರೆ ಮಾಹಿತಿಗಳನ್ನು www.nta.ac.in ವೆಬ್‍ಸೈಟ್‍ನಲ್ಲಇ್ಯವಿರುತ್ತದೆ ಎಂದು ಎನ್‍ಟಿಎ ಹಿರಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



