Connect with us

Dvgsuddi Kannada | online news portal | Kannada news online

ದಾವಣಗೆರೆ: ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಗೆ ಪೋರ್ಟೆಬಿಲಿಟಿ‌ ಮುಖಾಂತರ ಇ-ಕೆವೈಸಿ ನೋಂದಣಿಗೆ ಅವಕಾಶ

ದಾವಣಗೆರೆ

ದಾವಣಗೆರೆ: ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಗೆ ಪೋರ್ಟೆಬಿಲಿಟಿ‌ ಮುಖಾಂತರ ಇ-ಕೆವೈಸಿ ನೋಂದಣಿಗೆ ಅವಕಾಶ

ದಾವಣಗೆರೆ: ಜಿಲ್ಲೆಯ ಪಡಿತರ ಚೀಟಿದಾರರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮುಖಾಂತರ ಇ-ಕೆವೈಸಿ ಮಾಡಿಸಲು ಈ ತಿಂಗಳ ಅಂತ್ಯದವರೆಗೆ ಅವಕಾಶ ಕಲ್ಪಿಸಲಾಗಿದ್ದು, ತಪ್ಪದೆ ಇ-ಕೆವೈಸಿ ಮಾಡಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ.

ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ವಿವರಗಳೊಂದಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಇದುವರೆಗೆ ಮೂಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇ-ಕೆವೈಸಿ ಮಾಡಲು ಅವಕಾಶವಿತ್ತು. ಪ್ರಸ್ತುತ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮುಖಾಂತರ ಇ-ಕೆವೈಸಿ ಮಾಡಬಹುದಾಗಿರುತ್ತದೆ. ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಮೂಲ ನ್ಯಾಯಬೆಲೆ ಅಂಗಡಿಗಳಿಗೆ ಬಂದು ಇ-ಕೆವೈಸಿ ಮಾಡಿಸಿರುವುದಿಲ್ಲ. ಆದ್ದರಿಂದ ಅಂತವರಿಗೆ ಅನುಕೂಲವಾಗಲು ಪೋರ್ಟೆಬಿಲಿಟಿಯಲ್ಲಿ ಇ-ಕೆವೈಸಿಯನ್ನು ಮಾಡಲು ಈಗ ಅವಕಾಶ ಕಲ್ಪಿಸಲಾಗಿದೆ.

ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಾವು ವಾಸಿಸುವ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ. ಪಡಿತರ ಚೀಟಿದಾರರ ಎಲ್ಲಾ ಸದಸ್ಯರ ಬಯೋ ದೃಢೀಕರಣ ಮಾಡಿಸಬೇಕು. ಆಧಾರ್ ಸಂಖ್ಯೆ, ಫೋನ್ ನಂಬರ್, ಗ್ಯಾಸ್ ಹೊಂದಿರುವ ಮಾಹಿತಿ ಹಾಗೂ ಕುಟುಂಬದ ಸದಸ್ಯರ ಸಹ ಸಂಬಂಧವನ್ನು ಇ-ಕೆವೈಸಿಯಲ್ಲಿ ನಮೂದಿಸಬೇಕು.

ಇದು ಪಡಿತರ ಚೀಟಿದಾರರಿಗೆ ಅಂತಿಮ ಅವಕಾಶವಾಗಿದ್ದು, ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳಿಂದ ಪಡಿತರ ವಿತರಣೆ ರದ್ದು ಮಾಡಲಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಹಾಲಿ 4,21,577 ಪಡಿತರ ಚೀಟಿಗಳಿದ್ದು, ಅದರಲ್ಲಿ 14,60,150 ಸದಸ್ಯರು ಇರುತ್ತಾರೆ. ಇವರಲ್ಲಿ 12,89,863 ಸದಸ್ಯರು ಈಗಾಗಲೇ ಇ-ಕೆವೈಸಿ ಮಾಡಿಸಿದ್ದು, ಉಳಿದ 1,70,287 ಸದಸ್ಯರು ಇ-ಕೆವೈಸಿ ಮಾಡಿಸಲು ಬಾಕಿ ಇರುವುದರಿಂದ ಬಾಕಿ ಇರುವ ಎಲ್ಲಾ ಪಡಿತರ ಚೀಟಿದಾರರು ಈ ತಿಂಗಳ ಒಳಗಾಗಿ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಇಂದೇ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಪ್ರಕಟಣೆಯಲ್ಲು ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top