ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ (ಅ.11) 6.6 ಮಿ.ಮೀ. ಸರಾಸರಿ ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 3.2 ಮಿ.ಮೀ, ದಾವಣಗೆರೆ 4.9 ಮಿ.ಮೀ, ಹರಿಹರ 1.8 ಮಿ.ಮೀ, ಹೊನ್ನಾಳಿ 3.2 ಮಿ.ಮೀ, ಜಗಳೂರು 16.3 ಮಿ.ಮೀ, ನ್ಯಾಮತಿಯಲ್ಲಿ 5.5 ಮಿ.ಮೀ ಮಳೆಯಾಗಿದೆ.
ದಾವಣಗೆರೆ ವ್ಯಾಪ್ತಿಯಲ್ಲಿ 15 ಹರಿಹರ ತಾಲ್ಲೂಕಿನಲ್ಲಿ 08, ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 05 ಮನೆ ಹಾನಿಯಾಗಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 13 ಮನೆ ಹಾನಿಯಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 19 ಮನೆ ಹಾನಿಯಾಗಿವೆ. ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



