Connect with us

Dvgsuddi Kannada | online news portal | Kannada news online

ದಾವಣಗೆರೆ: ಪಿಬಿ ರಸ್ತೆಯ ವಿಶ್ವಬಂಧು ಟ್ರೇಡ್ ನಲ್ಲಿ ಕಳ್ಳತನ; ಐವರ ಬಂಧನ-15.32 ಲಕ್ಷದ ನಗದು, ಸ್ವತ್ತು ವಶ

ದಾವಣಗೆರೆ

ದಾವಣಗೆರೆ: ಪಿಬಿ ರಸ್ತೆಯ ವಿಶ್ವಬಂಧು ಟ್ರೇಡ್ ನಲ್ಲಿ ಕಳ್ಳತನ; ಐವರ ಬಂಧನ-15.32 ಲಕ್ಷದ ನಗದು, ಸ್ವತ್ತು ವಶ

ದಾವಣಗೆರೆ: ಕೃಷಿ ಉಪಕರಣ ಅಂಗಡಿ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 11 ಲಕ್ಷ ನಗದು ಸಹಿತ 15.32 ಲಕ್ಷದ ಸ್ವತ್ತನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ನಗರದ ಕೆಜಜೆ ನಗರ ಪೊಲೀಸ್ ರಾಣಿ ವ್ಯಾಪ್ತಿಯ ಪಿಬಿ ರಸ್ತೆಯಲ್ಲಿರುವ ವಿಶ್ವಬಂಧು ಟ್ರೇಡ್‌ ಅಂಗಡಿಯಲ್ಲಿ ಸುಮಾರು ಅರು ತಿಂಗಳಿನಿಂದ ಅಂಗಡಿಯಲ್ಲಿರುವ ಕೃಷಿ ಉಪಕರಣ ಕಾಣೆಯಾಗುತ್ತಿದ್ದು ದಿನಾಂಕ: 03.10.2022 ರಂದು ಅಂಗಡಿಗೆ ಬಂದು ನೋಡಿದಾಗ ರೂಂನಲ್ಲಟ್ಟದ ಲ್ಯಾಟೇಲ್ ಸಿಂಬೆಗಳು ಕಡಿಮೆ ಇದ್ದು ಅಂಗಡಿಯಲ್ಲಿ ಚೆಕ್ ಮಾಡಿ ನೋಡಲಾಗಿ ಹಾಕಿದ ಬೀಗ ಹಾಕಿದಂತೆಯೇ ಇದ್ದು ಎಲ್ಲಯೂ ಸಹ ಬೀಗ ಮುರಿದ ಅಥವಾ ಕಳ್ಳತನವಾದ ಕುರುಹುಗಳು ಕಂಡು ಬಂದಿರುವುದಿಲ್ಲ. ಒಟ್ಟು 10.70.475/-ರೂ ಬೆಲೆಯ ಕೃಷಿ ಉಪಕರಣಗಳು ಈಗ್ಗೆ ಸುಮಾರು ಆರು ತಿಂಗಳನಿಂದ ಕಳ್ಳತನವಾಗಿರುತ್ತವೆ ಪತ್ತೆ ಮಾಡಿಕೊಡಿ ಅಂತಾ ಸಂತೋಷ ಡಿ ಎಸ್ ಜನ್ ಶೇಖರಪ್ಪರವರು ನೀಡಿದ ದೂಲಿನ ಮೇರೆಗೆ ಕೆಜಟೆ ನಗರ ಪೊಲೀಸ್ ರಾಣಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಕಾರ್ಯಾಚರಣೆಯನ್ನು ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ಬಿ ತಾವಧ್ವಜ ಮತ್ತು ಕೆಜೆ ನಗರ ವೃತ್ತ ನಿರೀಕ್ಷಕ ಶಶಿಧರ ಯು.ಜೆ, ಬಡಾವಣೆ ಪೊಲೀಸ್ ನಿರೀಕ್ಷಕ ಧನಂಜಯ ರವರ ಮಾರ್ಗದರ್ಶನದಲ್ಲಿ ಕೆಜೆ ನಗರ ಪೊಲೀಸ್ ರಾಣೆಯ ಪಿ.ಎಸ್.ಐ ರವರಾದ ಪ್ರಭು ಡಿ ಕೆಳಗಿನಮನಿ (ಕಾ&ಸು) ಹಾಗು ಮಂಜುಳಾ ಜಿ.ಎ. ತನಿಖೆ-1, ಪ್ರೋ ಪಿಎಸ್‌ಐ ಸಾಗರ ಉತ್ತರವಾಲ, ಎಎಸ್‌ಐ ಈರಣ್ಣ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾದವ್‌, ಪ್ರಕಾಶ ಚ, ಅಮೃಣ್ಣ ಎಸ್ ಆರ್, ಎಮ್ ಮಂಜಪ್ಪ, ಎಂ ಎಸ್ ಶಿವರಾಜ್, ಷಣ್ಮುಕ, ಪ್ರಸನ್ನ, ರವಿ ಲಮಾಣಿ, ಕುಮಾರ ಡಿ ಹೆಚ್, ವೆಂಕಟೇಶ, ಸಂತೋಷ, ಮಹಾಂತೇಶ, ಶ್ರೀ ಮತಿ ಪುಷ್ಪಲತಾ, ಶ್ರೀ ರಾಘವೇಂದ್ರ ಶಾಂತರಾಜ ರವರನ್ನೊಳಗೊಂಡ ತಂಡವು ಆರೋಪಿತರಾದ 1]. ಮಲ್ಲಕಾರ್ಜುನ ಎಂ., ಐ.ಚಿತ್ತಾನಹಳ್ಳಿ ಗ್ರಾಮ, ದಾವಣಗೆರ ತಾ 2], ರಮೇಶ, ಪೇಷ್ಮೆ ಗ್ರಾಮ, ದಾವಣಗೆರೆ ತಾ||, 3], ಹನುಮಂತ ಆ ಗಿಡ್ಡ, ಚಿತ್ತನಹಳ್ಳಿ ಗ್ರಾಮ, ದಾವಣಗೆರೆ ತಾ||, 4, ಹನುಮಂತ @ ಯೋಗಿ, ರಾಗಿಮಸಲಾಡ ಗ್ರಾಮ, ಹರಪನಹಳ್ಳಿ ತಾ।। 5], ಸಿದ್ದೇಶ ಏನ್ ಅ‌, ನರಗನಹಳ್ಳಿ ಗ್ರಾಮ, ದಾವಣಗೆರೆ ತಾ|| ರವರನ್ನು ಪತ್ತೆ ಮಾಡಿ ಮೇಲ್ಕಂಡ ಪ್ರಕರಣವಲ್ಲದೆ ಕಜೆ ನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ ಮಾಯೆಯಲ್ಲಿ ವರದಿಯಾದ ಪ್ರಕರಣವನ್ನು ಸಹ ಪತ್ತೆ ಮಾಡಿದ್ದು ಒಟ್ಟು 1100.000 ರೂ ನಗದು ಹಣ, ಸುಮಾರು 32 ಸಾವಿರ ರೂ. ಬೆಲೆಯ ಕೃಷಿ ಉಪಕರಣಗಳು & ಕೃತ್ಯಕ್ಕೆ ಉಪಯೋಗಿಸಿದ 04 ಲಕ್ಷ ಬೆಲೆಯ ಬೊಲೊರ ವಾಹನವನ್ನು ವಶ ಪಡಿಸಿಕೊಂಡಿದ್ದು, ಒಟ್ಟು 15,32,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಐ ಶಿಷ್ಯಂತ್ ಐಪಿಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top