Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ 18.3 ಮಿ.ಮೀ ಮಳೆ; 54ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ 18.3 ಮಿ.ಮೀ ಮಳೆ; 54ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ದಾವಣಗೆರೆ :  ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು,  ಸೆ.06 ರಂದು 18.3 ಮಿ.ಮೀ. ಸರಾಸರಿ ಮಳೆಯಾಗಿದೆ.  ಜಿಲ್ಲಿ ಸುರಿದ ಭಾರಿ ಮಳೆಗೆ 54ಕ್ಕೂ ಹೆಚ್ಚು  ಮನೆಗಳಿಗೆ ಹಾನಿಯಾಗಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.

ಚನ್ನಗಿರಿಯಲ್ಲಿ ಮಳೆ 12.4 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 23.4 ಮಿ.ಮೀ, ಹರಿಹರದಲ್ಲಿ ಮಳೆ 19.5 ಮಿ.ಮೀ, ಹೊನ್ನಾಳಿ ಮಳೆ 11.0 ಮಿ.ಮೀ, ಜಗಳೂರು 27.8 ಮಿ.ಮೀ, ನ್ಯಾಮತಿಯಲ್ಲಿ 15.5 ಮಿ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 11 ಮನೆ ಭಾಗಶ: ಹಾನಿಯಾಗಿವೆ, ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಭಾಗಶ: ಮನೆ ಹಾನಿಯಾಗಿದ್ದು, 1 ತೀವ್ರಹಾನಿಗೊಳಗಾಗಿದೆ, 1 ದನದ ಕೊಟ್ಟಿಗೆ ಹಾನಿಯಾಗಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯ ದಿಡಗೂರು ಗ್ರಾಮದಲ್ಲಿ 1 ಹಸು ಸಿಡಿಲು ಬಡಿದು ಮೃತಪಟ್ಟಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆ ಹಾಗೂ 03 ತೀವ್ರ ಮನೆಹಾನಿಯಾಗಿವೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಹಾಗೂ 2 ತೀವ್ರ ಮನೆ ಹಾನಿಯಾಗಿದ್ದು, 09 ಭಾಗಶಃ ಮನೆಗಳು ಹಾನಿಯಾಗಿವೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 1 ತೀವ್ರ ಮನೆ ಹಾಗೂ 24 ಭಾಗಶ: ಮನೆಗಳು ಹಾನಿಯಾಗಿವೆ.ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top