Connect with us

Dvgsuddi Kannada | online news portal | Kannada news online

ದಾವಣಗೆರೆ: ಫೆ.27 ರಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ದಾವಣಗೆರೆ

ದಾವಣಗೆರೆ: ಫೆ.27 ರಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ದಾವಣಗೆರೆ: ಪ್ರಸಕ್ತ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಫೆ. 27 ರಿಂದ ಮಾ. 02 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಪೋಲಿಯೋ ಕಾಯಿಲೆಯು ಒಂದು ವೈರಸ್‍ನಿಂದ ಹರಡುವ ಕಾಯಿಲೆಯಾಗಿದ್ದು, ಈ ಖಾಯಿಲೆಯಿಂದ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ. ಅನಾದಿಕಾಲದಿಂದಲೂ ಈ ಖಾಯಿಲೆಯು ನಮ್ಮ ನಡುವೆ ಇದ್ದು, ನಮ್ಮ ನಡುವಿನ ಬಹಳಷ್ಟು ಮಕ್ಕಳಿಗೆ ಶಾಶ್ವತ ಅಂಗವಿಕಲತೆಯನ್ನು ಉಂಟು ಮಾಡುತ್ತಿತ್ತು. ಬಳಿಕ ಇದರ ಪ್ರಭಂದಕವಾಗಿ ಲಸಿಕೆಯನ್ನು ಕಂಡು ಹಿಡಿಯಲಾಯಿತು. ಭಾರತದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಖಾಯಿಲೆಯ ವಿರುದ್ಧವಾಗಿ ಬಾಯಿ ಮೂಲಕ ಪೋಲಿಯೋ ಹನಿ ಹಾಕುವ ಲಸಿಕೆಯನ್ನು ಉಪಯೋಗಿಸಲಾಗಿದೆ. 1985 ರಿಂದ ಪೋ ನಿರ್ಮೂಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸದಸ್ಯ ರಾಷ್ಟ್ರಗಳು ಕಾರ್ಯಪ್ರವೃತ್ತವಾದವು. ಭಾರತವು 1995 ರಲ್ಲಿ ಪೋಲಿಯೋ ನಿರ್ಮೂಲನೆಗೆ ಕ್ರಮ ತೆಗೆದುಕೊಂಡಿತು.

ಪೋಲಿಯೋ ನಿರ್ಮೂಲನೆಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ 0-5 ವರ್ಷದ ಮಕ್ಕಳಿಗೆ ಬಾಯಿ ಮೂಲಕ ಎರಡು ಹನಿ ಪೋಲಿಯೋ ಲಸಿಕೆ ಹಾಕುವುದು. ರಾಷ್ಟ್ರೀಯ ಲಸಿಕಾ ದಿನಗಳಲ್ಲಿ (ಪಲ್ಸ್ ಪೆÇೀಲಿಯೋ ಕಾರ್ಯಕ್ರಮದಲ್ಲಿ) 0-5 ವರ್ಷದ ಎಲ್ಲಾ ಮಕ್ಕಳಿಗೂ ಒಂದೇ ಬಾರಿಗೆ ಪೋಲಿಯೋ ಲಸಿಕೆಯನ್ನು ಹಾಕುವುದು ಮತ್ತು ಪೆÇೀಲಿಯೋ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಖಾಯಿಲೆಯನ್ನು ದೃಢಪಡಿಸಿಕೊಳ್ಳುವುದು ಇವು ಮುಖ್ಯವಾದವುಗಳಾಗಿವೆ.

ಪ್ರಾರಂಭದಲ್ಲಿ ಹಲವು ಸಾವಿರ ಸಂಖ್ಯೆಯಲ್ಲಿದ್ದ ಪೋಲಿಯೋ ಪ್ರಕರಣಗಳು ಈ ಮೇಲಿನ ಕ್ರಮಗಳಿಂದಾಗಿ ಕಡಿಮೆಯಾಗುತ್ತಾ ಬಂದು ಭಾರತದಲ್ಲಿ ಕೊನೆಯ ಪ್ರಕರಣ 13 ಜನವರಿ 2011 (ಔರಾ, ಪಶ್ಚಿಮಬಂಗಾಳದಲ್ಲಿ) ರಲ್ಲಿ ಕಂಡುಬಂದಿತ್ತು. ಕರ್ನಾಟಕದಲ್ಲಿ ಕೊನೆಯ ಪ್ರಕರಣ 2007 ರಲ್ಲಿ (ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ವಲಸಿಗ ಸಮುದಾಯದಲ್ಲಿ) ಕಂಡುಬಂದಿತ್ತು. ಒಟ್ಟಾರೇ ಭಾರತದಲ್ಲಿ ಈಗ ಸತತವಾಗಿ 06 ನೇ ವರ್ಷವೂ ಕೂಡ ಯಾವುದೇ ಪೋಲಿಯೋ ಪ್ರಕರಣ ಕಂಡುಬಂದಿರುವುದಿಲ್ಲ. 27 ಮಾರ್ಚ್ 2014 ರಂದು ದಕ್ಷಿಣ ಪೂರ್ವ ಏಶಿಯಾ ವಲಯವನ್ನು ಪೆÇೀಲಿಯೋ ಮುಕ್ತ ಎಂದು ಘೋಷಿಸಲಾಗಿದೆ.

2022 ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಫೆ.27 ರಂದು ಬೂತ್‍ಗಳಲ್ಲಿ 0-5 ವಯಸ್ಸಿನ ಮಕ್ಕಳಿಗೆ ಪೋಲಿಯೋ ಲಸಿಕೆಯಯನ್ನು ಹಾಕಲಾಗುವುದು ಹಾಗೂ ಫೆ.28 ರಿಂದ ಮಾ.02 ರವರೆಗೆ (03 ದಿನಗಳು) ಮನೆ ಮನೆ ಭೇಟಿ ಮಾಡಿ ಬೂತ್‍ನಲ್ಲಿ ಬಿಟ್ಟುಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಒಟ್ಟಾರೆ ವ್ಯಾಪ್ತಿಯಲ್ಲಿರುವ 0-5 ವರ್ಷದ ಯಾವುದೇ ಮಗು ಪೋಲಿಯೋ ಹನಿ ಹಾಕಿಸದೇ ಉಳಿಯಬಾರದು ಎಂಬುದು ಆರೋಗ್ಯ ಇಲಾಖೆಯ ಆಶಯವಾಗಿದೆ.

ಜಿಲ್ಲೆಯಲ್ಲಿ 0-5 ವರ್ಷ ಮಕ್ಕಳ ಸಂಖ್ಯೆ ಗ್ರಾಮೀಣ ಭಾಗದಲ್ಲಿ 93267 ಮತ್ತು ನಗರ ಪ್ರದೇಶದಲ್ಲಿ 66990 ಒಟ್ಟು 160257 ಮಕ್ಕಳ ಗುರಿ ಹೊಂದಲಾಗಿದೆ. ಇದರಲ್ಲಿ 120 ಹೈರಿಸ್ಕ್ ಪ್ರದೇಶಗಳೆಂದು ಗುರುತಿಸಲಾಗಿದೆ. ಹೈರಿಸ್ಕ್ ಪ್ರದೇಶಗಳಲ್ಲಿ 12501 ಮಕ್ಕಳನ್ನು ಗುರುತಿಸಲಾಗಿದೆ. ಇದಕ್ಕಾಗಿ 1121 ಸ್ಥಿರ ಲಸಿಕಾ ಬೂತ್‍ಗಳು, 23 ಟ್ರಾನಿಸ್ಟ್ ಬೂತ್‍ಗಳು, 12 ಮೊಬೈಲ್ ಬೂತ್‍ಗಳು ಹಾಗೂ 1855 ಲಸಿಕಾ ಕಾರ್ಯಕರ್ತರು ಮತ್ತು 206 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top