Connect with us

Dvgsuddi Kannada | online news portal | Kannada news online

ದಾವಣಗೆರೆ: ನಗರದ ಈ ಪ್ರದೇಶದಲ್ಲಿ ಇಂದು ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ನಗರದ ಈ ಪ್ರದೇಶದಲ್ಲಿ ಇಂದು ವಿದ್ಯುತ್ ವ್ಯತ್ಯಯ

ದಾವಣಗೆರೆ: ಶನೇಶ್ವರ ಎಫ್9 & ಇಂಡಸ್ಟ್ರಿಯಲ್ ಎಫ್13 ಫೀಡರ್‍ನಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ವಾಹಣಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಜ.22)  ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶನೇಶ್ವರ ಎಫ್9 ಫೀಡರ್ ಪಿಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಬಿ.ಎಸ್.ಎನ್.ಎಲ್‍ಕಛೇರಿ, ಶಂಕರ್ ವಿಹಾರ್ ಬಡಾವಣೆ, ಶಾಂತಿನಗರ ಮತ್ತು ವಿನಾಯಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಎಫ್-13ಇಂಡಸ್ಟ್ರಿಯಲ್ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯ ಲೋಕಿಕೆರೆರಸ್ತೆ, ಸುಬ್ರಹ್ಮಣ್ಯನಗರ, ಎಸ್.ಎ.ರವೀಂದ್ರನಾಥ ಬಡಾವಣೆ ಮತ್ತುಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಎಫ್-17 ಅಮೃತನಗರ ಮಾರ್ಗದ ಗ್ರಾಮಗಳಾದ ದೂಡ್ಡಬೂದಿಹಾಳ್, ಚಿಕ್ಕಬೂದಿಹಾಳ್, ದೇವರಹಟ್ಟಿ, ಚಿತ್ತನಹಳ್ಳಿ, ಬಿ. ಕಲ್ಪನಹಳ್ಳಿ ಶಿವಪುರ, ಭೂಸವನಹಟ್ಟಿ ಮತ್ತು ಅಮೃತನಗರ, ಎಫ್-14 ಯರಗುಂಟ ಮಾರ್ಗದ ಗ್ರಾಮಗಳಾದ ಯರಗುಂಟ, ಕರೂರು, ಅಶೋಕನಗರ ಮತ್ತು ಕೊಂಡಜ್ಜಿ ರೋಡ್, ಎಫ್-18 ನೀಲಾಹಳ್ಳಿ ಮಾರ್ಗದ ಗ್ರಾಮಗಳಾದ ನೀಲಾನಹಳ್ಳಿ, ದೂಡ್ಡಬಾತಿ, ಹಳೇಬಾತಿ,ಮತ್ತು ಗುಡ್ಡದಕ್ಯಾಂಪ್ ಸುತ್ತ ಮುತ್ತ, ಎಫ್-10 ವಾಟರ್ ವಕ್ರ್ಸ, ಮಾರ್ಗದ ಮಹಾನಗರ ಪಾಲಿಕೆ ಕುಡಿಯುವ ನೀರಿನ ಘಟಕ, ಎಫ್-20 ಮಾರ್ಗದ ಗ್ರಾಮಗಳಾದ ಅವರಗೂಳ್ಳ, ಕಕ್ಕರಗೊಳ್ಳ ಮತ್ತು ಕೋಡಿಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top