ದಾವಣಗೆರೆ: ಜಲಸಿರಿ ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 13 ರಂದು ದಾವಣಗೆರೆ ನಗರದ ಈ ಏರಿಯಾದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಜಯನಗರ ಫೀಡರ್ ವ್ಯಾಪ್ತಿಯ ಭಗೀರಥ ಲೇಔಟ್, ಆಂಜನೇಯ ಮಂಟಪ, ಕರಿಯಮ್ಮ ದೇವಸ್ಥಾನ, ಚಿಕ್ಕನಹಳ್ಳಿ ಹೊಸ ಬಡಾವಣೆ, ಮಣಿಕಂಠ ಸರ್ಕಲ್, ರಾಷ್ಟ್ರೋತ್ಥಾನ ಶಾಲೆ, ಕಲ್ಲು ಬಡಾವಣೆ, ಜಯನಗರ ಚರ್ಚ್ ಎದುರು, ಶ್ರೀರಾಮ್ ಬಡಾವಣೆ, ನಿಟುವಳ್ಳಿ, ನಿಟುವಳ್ಳಿ ಹೊಸ ಬಡಾವಣೆ, ದುರ್ಗಾಂಬಿಕ ದೇವಸ್ಥಾನ, ಇ.ಎಸ್.ಐ ಆಸ್ಪತ್ರೆ, ನಿಟ್ಟುವಳ್ಳಿ ಸಂತೆ ಮಾರ್ಕೇಟ್, 60 ಅಡಿ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.