ದಾವಣಗೆರೆ; ದಾವಣಗೆರೆ ನಗರದಲ್ಲಿ 24*7 ಜಲಸಿರಿ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ವಿನೋಬ 2ನೇ ಮೇನ್, ಹಳೆ ರೆಡ್ಡಿ ಬಿಲ್ಡಿಂಗ್, ಚರ್ಚ್ ರಸ್ತೆ, ರೆಸಿಡೆನ್ಸಿ, ಜಯದೇವ ಶಾಲೆ, ಮಸೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇನ್ನೂ ಹರಿಹರ ತಾಲ್ಲೂಕಿನ ಕೊಂಡಜ್ಜಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರು ಗಾಳಿ, ಗುಡುಗು, ಸಿಡಿಲು ಸಹಿತ ನಿನ್ನೆ (ಏ.19) ಸಂಜೆ ಭಾರಿ ಮಳೆಯಾಗಿದೆ. ಸುಂಟರಗಾಳಿಗೆ ಮರಗಳು, ಮನೆ ತಗಡುಗಳು ಹಾರಿ ಹೋಗಿವೆ. ಮರಗಳು ವಿದ್ಯುತ್ ಕಂಬ ಮೇಲೆ ಬಿದ್ದ ಪರಿಣಾಮ ಕರುಬರಹಳ್ಳಿ, ಕೆಂಚನಹಳ್ಳಿ, ಬುಳ್ಳಾಪುರ, ಕೊಂಡಜ್ಜಿ ಗ್ರಾಮಲ್ಲಿ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದುವರೆಗೂ ಕರೆಂಟ್ ಬಂದಿಲ್ಲ. ಅನೇಕ ಕಡೆ ವಿದ್ಯುತ್ ಕಂಬಗಳು ಮುರಿದು ನೆಲಕ್ಕೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ತಡವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.