ದಾವಣಗೆರೆ: ಇಂದು (ಏ. 21) ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬಸವೇಶ್ವರ ಫೀಡರ್‍ನಲ್ಲಿ 24*7 ಜಲಸಿರಿ ಕಾಮಗಾರಿ ಅಡಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಸವೇಶ್ವರ ಫೀಡರ್ ವ್ಯಾಪ್ತಿಯ ಎಸ್.ಎಸ್. ಬಡಾವಣೆ, ಎ ಮತ್ತು ಬಿ ಬ್ಲಾಕ್, ಶಾಂತಿ ಆಲಯ, ಕುಂದುವಾಡ ರಸ್ತೆ, ಅಥಣಿ ಕಾಲೇಜ್ ರಸ್ತೆ, ಅಂಗವಿಕಲರ ಶಾಲೆ, ಒಳಾಂಗಣ ಕ್ರೀಡಾಂಗಣ, ಕರ್ನಾಟಕ ಬ್ಯಾಂಕ್ ಶ್ಯಾಮನೂರು ರಸ್ತೆ, ಮಹಾನಗರಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಬಾಲಾಜಿ ನಗರ, ಕುಂದುವಾಡಕೆರೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



