ದಾವಣಗೆರೆ; ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಆಗಿರುವ ಸೋಲು, ಈ ಬಾರಿ ಕೋಲಾರದಲ್ಲೂ ಮುಂದುವರಿಯಲಿದೆ. ಅವರು ಮಾಡಿದ ಪಾಪದ ಕೆಲಸದಿಂದ ಅವರೇ ಸೋಲುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ದ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರಪಾಪದ ಕೊಡ ತುಂಬಿದೆ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಕುರುಬ ಸಮಾಜವೇ ಕಾಂಗ್ರೆಸ್ ಅನ್ನು ಸೋಲಿಸುತ್ತದೆ. ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ.ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ.ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಈ ಬಾರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಹೋಗೊದಿಲ್ಲ ಎಂದರು.
ಇಲ್ಲಿಯವರೆಗೂ ಸಿಎಂ ಆಗಿದ್ದವರು ಕ್ಷೇತ್ರ ಬದಲಾವಣೆ ಮಾಡಿಲ್ಲ. ಆದರೆ, ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರ ವಹಿಸಿದ್ದಾಗ 120 ಸ್ಥಾನ ಬಂದು ಸಿದ್ದರಾಮಯ್ಯ ಸಿಎಂ ಆಗಿದ್ದರು. ಆದರೆ ಸಿದ್ದರಾಮಯ್ಯ ಆಡಳಿತದಿಂದ 2018 ರಲ್ಲಿ 70-80 ಸ್ಥಾನ ಗಳಿಸಿದೆ.ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚು ಹಗರಣ ನಡೆದಿದೆ. ಹಗರಣ ಹೊರ ಬರುತ್ತದೆ ಎಂದು ಲೋಕಾಯುಕ್ತ ಮುಚ್ಚಿ ಹಾಕಿದರು ಎಂದರು.
ಎಸಿಬಿಯನ್ನು ತೆರೆದು ಅವರ ಕೈಕೆಳಗೆ ಇರುವಂತೆ ಮಾಡಿದರು.ರಾಜ್ಯದಲ್ಲಿ ಭ್ರಷ್ಟ ಸಿಎಂ ಎಂದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ವ್ಯಾಪಕವಾಗಿ ಭ್ರಷ್ಟಾಚಾರ ಮಾಡಿ 50% ಕಮಿಷನ್ ಪಡೆದು ಅಧಿಕಾರ ಮಾಡಿದರು.ಕರ್ನಾಟಕದಲ್ಲಿ ಸಿದ್ದರಾಮಯ್ಯನದ್ದು ವರ್ಚಸ್ಸು ಮುಗಿದು ಹೋಗಿದೆ.ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದೆ.ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಕಿತ್ತಾಡೋ ಪ್ರಶ್ನೆ ಬರುತ್ತದೆ. ಆದರೆ ಅವರು ಅಧಿಕಾರ ಕ್ಕೆ ಬರೋದಿಲ್ಲ, ಅವರಲ್ಲಿ ಒಗ್ಗಟ್ಟು ಬರೋದಿಲ್ಲ ಎರಡನೇ ಪಟ್ಟಿ ಬಿಡುಗಡೆ ಮಾಡಿದ ನಂತರ ಅವರ ಪರಿಸ್ಥಿತಿ ಹೇಗಾಗಲಿದೆ ಎಂದು ಜನರೇ ನೋಡುತ್ತಾರೆ. ಎಷ್ಟು ಜನ ಪಕ್ಷ ಬಿಟ್ಟು ಹೋಗುತ್ತಾರೇ ಎನ್ನುವುದು ಗೊತ್ತಾಗುತ್ತದೆ.
ಡಿ.ಕೆ. ಶಿವಕುಮಾರ್ ಬಗ್ಗೆ ಹೀನಾಯವಾಗಿ ಮಾತನಾಡಿ ಈಗ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯಗೆ ಸ್ಥಿಮಿತವಾದ ಬುದ್ದಿ ಹೊರಟುಹೋಗಿದೆ. ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಅವರಿಗೇ ಚಂಚಲವಾಗಿದೆ. ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಕುರುಬ ಸಮಾಜದವರು ಕಾಂಗ್ರೇಸ್ ಗೆಲ್ಲಿಸಿದ್ದರು.ಆದರೆ ಈಗ ಕುರುಬ ಸಮುದಾಯ ಬಿಜೆಪಿ ಪರವಾಗಿದೆ.ಅವರು ಅಧಿಕಾರದಲ್ಲಿದ್ದಾಗ ಕುರುಬರಿಗೆ ಯಾವುದೇ ಒಳಿತು ಮಾಡಿಲ್ಲ ಎಂದರು.



