Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹಿಳೆಯರೊಂದಿಗೆ ಸೇರಿ ಅಶ್ಲೀಲ ವಿಡಿಯೋ ಮಾಡಿ ವ್ಯಕ್ತಿಯೊಬ್ಬರಿಂದ 1.50 ಲಕ್ಷ ಹಣ ಪಡೆದು ವಂಚನೆ; ಆರೋಪಿಗಳ ಗ್ಯಾಂಗ್ ಅರೆಸ್ಟ್

ಕ್ರೈಂ ಸುದ್ದಿ

ದಾವಣಗೆರೆ: ಮಹಿಳೆಯರೊಂದಿಗೆ ಸೇರಿ ಅಶ್ಲೀಲ ವಿಡಿಯೋ ಮಾಡಿ ವ್ಯಕ್ತಿಯೊಬ್ಬರಿಂದ 1.50 ಲಕ್ಷ ಹಣ ಪಡೆದು ವಂಚನೆ; ಆರೋಪಿಗಳ ಗ್ಯಾಂಗ್ ಅರೆಸ್ಟ್

ದಾವಣಗೆರೆ; ಮಹಿಳೆಯರೊಂದಿಗೆ ಸೇರಿ ಅಶ್ಲೀಲ ವಿಡಿಯೋ ಮಾಡಿ ವ್ಯಕ್ತಿಯೊಬ್ಬರಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟು, ರೂ 1.50 ಲಕ್ಷ ಹಣ ಪಡೆದು ವಂಚನೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೂರುದಾರನಿಗೆ ಆರೋಪಿತರು ಫೋನ್ ಮಾಡಿದ್ದು ಮಿಸ್ ಕಾಲ್ ಆಗಿರುತ್ತದೆ. ನಂತರ ವಾಪಾಸ್ ಫೋನ್ ಮಾಡಿದಾಗ ಗಂಗಾ ಹೆಸರಿನ ಹಿರೇಮಳಲಿ ಗ್ರಾಮದವಳು ಅಂತಾ ಪರಿಚಯಿಸಿಕೊಂಡು ಪ್ರತಿನಿತ್ಯ ಫೋನ್ ನಲ್ಲಿ ಮಾತನಾಡಿ ಹಣ ಹಾಕಿಸಿಕೊಂಡಿದ್ದಾರೆ. ನಂತರ ದಿ:26-03-23 ರಂದು ಪಿರ್ಯಾದಿ ದಾವಣಗೆರೆಗೆ ಬಂದಿದ್ದಾಗ ಗಂಗ, ಹರೀಶ, ಚಂದ್ರು ಮತ್ತೊಬ್ಬ ವ್ಯಕ್ತಿ ಹಾಗೂ ಗಿಡ್ಡ ಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಜೊತೆ ಸೇರಿಕೊಂಡು ಒಳಸಂಚು ಮಾಡಿ ತಮ್ಮ ಜೊತೆಗೆ ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿದ್ದಾರೆ. ಸಿದ್ದವೀರರಪ್ಪ ಬಡಾವಣೆಯ ಮನೆಗೆ ಕರೆಯಿಸಿಕೊಂಡು ಆರೋಪಿತರೆಲ್ಲ ಸೇರಿಕೊಂಡು ಪ ಹೆದರಿಸಿ ಅಶ್ಲೀಲವಾಗಿ ವಿಡಿಯೋ ಮಾಡಿ ಬೆದರಿಸಿ ಬಲವಂತವಾಗಿ 30 ಲಕ್ಷಕ್ಕೆ ಬೇಡಿಕೆ ಇಟ್ಟು1.50 ಲಕ್ಷಗಳನ್ನು ಪಡೆದುಕೊಂಡು ಈ ವಿಚಾರವನ್ನು ಯಾರಿಗಾದರೂ ಹೇಳಿದಲ್ಲಿ ಜೀವಸಹಿತ ಬಿಡುವುದಿಲ್ಲ ಅಂತಾ ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ಪಿ ದೊಡ್ಡಮನಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ ಸಿ ಶೇತಸನದಿ ಮಾರ್ಗದರ್ಶನಲ್ಲಿ ಮೇಘರಾಜ್ ದೊಡ್ಡಮನಿ ಪಿಎಸ್‌ಐ, ರೇಣುಕಾ ಜಿ.ಎಂ ಪಿ.ಎಸ್.ಐ ವಿದ್ಯಾ ನಗರ ಠಾಣೆ, ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿಗಳಾದ ವಿಜಯ್ ಎ.ಎಸ್.ಐ, ಗೋಪಿನಾಥ ನಾಯ್ಕ, ಯೋಗೇಶ್ ನಾಯ್ಕ, ಭೋಜಪ್ಪ ಕಿಚಡಿ, ಆಶಾ ಎಣ್ಣಿ ಮತ್ತು ಡಿ.ಸಿ.ಆರ್.ಬಿ ವಿಭಾಗದ ಆಂಜನೇಯ ರವರುಗಳನ್ನೊಳಗೊಂಡ ತಂಡ ಆರೋಗಳನ್ನು ಬಂಧಿಸಿದೆ.

ಆರೋಪಿತರಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮ ಬಂಧಿಸಿದ್ದು, ಆರೋಪಿತರಿಂದ ಒಟ್ಟು 1.30 ಲಕ್ಷಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿರುತ್ತದೆ. ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ/ಸಿಬ್ಬಂಧಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top