Connect with us

Dvgsuddi Kannada | online news portal | Kannada news online

ದಾವಣಗೆರೆ: ಒಮ್ಮೆಯಾದರೂ ಖಾಕಿ ಡ್ರಸ್ ನಲ್ಲಿ ಎಸ್ ಪಿ ಸೀಟ್ ನಲ್ಲಿ ಕೂರಬೇಕೆಂಬ ವಿಶೇಷ ಚೇತನ ಯುವತಿ ಆಸೆ ಈಡೇರಿಸಿದ ಜಿಲ್ಲಾ ಪೊಲೀಸ್

ದಾವಣಗೆರೆ

ದಾವಣಗೆರೆ: ಒಮ್ಮೆಯಾದರೂ ಖಾಕಿ ಡ್ರಸ್ ನಲ್ಲಿ ಎಸ್ ಪಿ ಸೀಟ್ ನಲ್ಲಿ ಕೂರಬೇಕೆಂಬ ವಿಶೇಷ ಚೇತನ ಯುವತಿ ಆಸೆ ಈಡೇರಿಸಿದ ಜಿಲ್ಲಾ ಪೊಲೀಸ್

ದಾವಣಗೆರೆ: ಒಮ್ಮೆಯಾದರೂ ಖಾಕಿ ಡ್ರಸ್ ನಲ್ಲಿ ಎಸ್ ಪಿ ಸೀಟ್ ನಲ್ಲಿ ಕೂರಬೇಕು ಎಂಬ ವಿಶೇಷ ಚೇತನ ಯುವತಿಯ ಆಸೆಯನ್ನು ಜಿಲ್ಲಾ ಪೊಲೀಸ್​ ಇಲಾಖೆ ಈಡೇರಿಸಿದೆ. ಇದರಿಂದ ಆ ಯುವತಿ ಮತ್ತು ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.

ನಗರದಲ್ಲಿ ಕಂಪ್ಯೂಟರ್​ ಟೈಪಿಂಗ್​ ಅಂಗಡಿ ಇಟ್ಟುಕೊಂಡಿರುವ ಕೆಟಿಜೆ ನಗರ ನಿವಾಸಿ ವಿಜಯಲಕ್ಷ್ಮೀ ಎಂಬುವರ ಪುತ್ರಿ 18 ವರ್ಷದ ಸಾಧನಾ ಎಂ.ಪಾಟೀಲ್ ಮಿದುಳು ವಾತ ಕಾಯಿಲೆಯಿಂದ ಬಳಲುತ್ತಿದ್ದು, ಓದಿನಲ್ಲಿ ಚುರುಕಾಗಿರುವ ಸಾಧನಾ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.76 ಅಂಕ ಗಳಿಸಿದ್ದು, ಬಾಲ್ಯದಿಂದಲೂ ಎಸ್​ಪಿ ಆಗಬೇಕು ಎಂಬ ಕನಸಿತ್ತು. ಆರೋಗ್ಯ ಸಮಸ್ಯೆಯಿಂದ ಇದು ಸಾಧ್ಯವಿಲ್ಲ. ಆದರೆ, ಮಗಳನ್ನು ಪೊಲೀಸ್​ ಅಧಿಕಾರಿಯ ವೇಷದಲ್ಲಿ ನೋಡಬೇಕು ಎಂಬ ಅಪೇಕ್ಷೆಯಿಂದ ವಿಜಯಲಕ್ಷ್ಮೀ ಅವರು ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಆಸೆಯಲ್ಲಿ ಜಿಲ್ಲಾ ಪೊಲೀಸರು ಈಡೇರಿಸಿದ್ದಾರೆ.

ಪೊಲೀಸ್ ಡ್ರಸ್ ನಲ್ಲಿ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್​ ಅವರ ಪಕ್ಕದಲ್ಲಿ 45 ನಿಮಿಷ ಕಾಲ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ಯುವತಿ ಧರಿಸಿದ್ದ ಡ್ರಸ್ ಮೇಲೆ ಸಾಧನಾ ಎಂ.ಪಾಟೀಲ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಾವಣಗೆರೆ ಎಂದು ಬರೆದ ನೇಮ್​ ಪ್ಲೇಟ್​ ಹಾಕಲಾಗಿತ್ತು. ಈ ದೃಶ್ಯವನ್ನು ತಾಯಿ ವಿಜಯಲಕ್ಷ್ಮೀ ಮತ್ತು ಕುಟುಂಬದವರು ನೋಡಿ ಸಂತೋಷ ಪಟ್ಟರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top