Connect with us

Dvgsuddi Kannada | online news portal | Kannada news online

ದಾವಣಗೆರೆ: ಪೊಲೀಸ್ ಇಲಾಖೆ ಮೇಲಿನ ಸಾರ್ವಜನಿಕರ ಭರವಸೆ ಉಸಿಯಾಗದಿರಲಿ; ನಿವೃತ್ತ ಡಿವೈಎಸ್ಪಿ ಬಸವರಾಜ್

ದಾವಣಗೆರೆ

ದಾವಣಗೆರೆ: ಪೊಲೀಸ್ ಇಲಾಖೆ ಮೇಲಿನ ಸಾರ್ವಜನಿಕರ ಭರವಸೆ ಉಸಿಯಾಗದಿರಲಿ; ನಿವೃತ್ತ ಡಿವೈಎಸ್ಪಿ ಬಸವರಾಜ್

ದಾವಣಗೆರೆ: ಸರ್ಕಾರದ ವಿವಿಧ ಇಲಾಖೆಗಳ ಸೇವೆಗಿಂತಲೂ ಪೊಲೀಸ್ ಇಲಾಖೆ ಸೇವೆ ಭಿನ್ನವಾಗಿರುತ್ತದೆ. ಕಾನೂನು ಸುವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಯಾಗಲಿದೆ. ಸಂಕಷ್ಟದಲ್ಲಿದ್ದಾಗ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಲಿದೆ ಎಂಬ ನಂಬಿಕೆ ಎಂದೂ ಉಸಿಯಾಗದಂತೆ ನಮ್ಮ ಸೇವೆ ನಿರಂತರವಾಗಿರಬೇಕೆಂದು ನಿವೃತ್ತ ಪೊಲೀಸ್ ಉಪನಿರೀಕ್ಷಕ ಸಿ.ಎನ್.ಬಸವರಾಜ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬೇರೆ ಇಲಾಖೆಗಿಂತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಅತಿ ಮುಖ್ಯವಾಗಿರುತ್ತದೆ. ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾನೂನು ಪಾಲನೆ, ಅನುಷ್ಠಾನದಲ್ಲಿ ನೇರವಾಗಿ ಭಾಗಿಯಾಗುವರು. ಸಾರ್ವಜನಿಕರೊಂದಿಗೆ ಹತ್ತಿರದ ಸಂಬಂಧವಿರುತ್ತದೆ. ಕಾನೂನು ಉಲ್ಲಂಘನೆಯಾದಾಗ ಜನಸಾಮಾನ್ಯರಿಗೆ ನೆರವಾಗುವ ಮೂಲಕ ರಕ್ಷಣೆಯನ್ನು ಒದಗಿಸುತ್ತಾರೆ ಎಂಬ ಅಪಾರವಾದ ನಂಬಿಕೆಯನ್ನು ಜನರು ಇಟ್ಟುಕೊಂಡಿರುತ್ತಾರೆ, ಪ್ರಾಮಾಣಿಕ ಸೇವೆ ಮಾಡುವ ಮೂಲಕ ಇಲಾಖೆ ಘನತೆ, ಗೌರವ ಹೆಚ್ಚು ಮಾಡೋಣ ಎಂದರು.
ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ; ಕೆ.ತ್ಯಾಗರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೊಲೀಸ್ ಧ್ವಜಗಳ ವಿತರಣೆ ಮಾಡಿದರು.

ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಏಪ್ರಿಲ್ 2 ರಾಜ್ಯದಲ್ಲಿ ಪೆÇಲೀಸ್ ಕಾಯ್ದೆ ತಂದಂತಹ ದಿನ, 1965 ರಿಂದ ಇಲ್ಲಿಯವರೆಗೂ ಕರ್ನಾಟಕ ರಾಜ್ಯ ಪೆÇಲೀಸ್ ಧ್ವಜ ದಿನಾಚರಣೆಯಾಗಿ ಆಚರಿಸುತ್ತಾ ಬರಲಾಗಿದೆ. ಪೊಲೀಸ್ ಇಲಾಖೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದಂತಹ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆಯನ್ನ ಸ್ಮರಿಸುವಂತಹ ಈ ದಿನ, ಅವರ ಕಲ್ಯಾಣವೇ ನಮ್ಮ ಗುರಿಯಾಗಿದ್ದು ನಿವೃತ್ತ ಅಧಿಕರಿಗಳು ಸಲ್ಲಿಸಿದ ಸೇವೆ ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸ್ಪೂರ್ತಿ ಹಾಗೂ ಮಾದರಿಯಾಗಿರಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತರಾದ ಶೈಲಜಾ, ನಿವೃತ್ತ ಅಧಿಕಾರಿಗಳಾದ ಶಿವಾಚಾರ್ಯ, ಸಕ್ರಿ ಬಸವರಾಜಪ್ಪ , ರವಿನಾರಾಯಣ, ಲಿಂಗಾರೆಡ್ಡಿ ಮತ್ತು ಪೆÇಲೀಸ್ ಇಲಾಖೆಯಲ್ಲಿನ ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಹೆಚ್ಚುವರಿ ಪೆÇಲೀಸ್ ಅಧೀಕ್ಷಕರಾದ ವಿಜಯಕುಮಾರ್, ಎಂ.ಸಂತೋಷ ವಂದಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top