Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ; 14.80 ಲಕ್ಷ  ಮೌಲ್ಯದ 38 ಬೈಕ್  ವಶ; 6 ಆರೋಪಿಗಳ ಬಂಧನ

bike dvg case

ದಾವಣಗೆರೆ

ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ; 14.80 ಲಕ್ಷ  ಮೌಲ್ಯದ 38 ಬೈಕ್  ವಶ; 6 ಆರೋಪಿಗಳ ಬಂಧನ

ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಜಿಲ್ಲಯೆ ಒಟ್ಟು  14.80 ಲಕ್ಷ  ಮೌಲ್ಯದ 38 ಬೈಕ್  ವಶಕ್ಕೆ ಪಡೆಯಲಾಗಿದೆ. ಈ ಸಬಂಧ  ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ.

ಬೈಕ್ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಹರಿಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ ನೇತೃತ್ವದಲ್ಲಿ ಹರಿಹರ ನಗರ ಠಾಣೆಯ ಪಿಎಸ್‌ಐ  ಸುರೇಶ ,  ಪಿಎಸ್ ಐ ಲತಾ ವಿ ತಾಳೇಕರ್  ಹಾಗೂ ಸಿಬ್ಬಂದಿಯವರನ್ನೋಳಗೊಂಡ ತಂಡವನ್ನು ರಚಿಸಿದ್ದು, ಈ ತಂಟ  ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದ್ವಿಚಕ್ರ ವಾಹನ (ಬೈಕ್) ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6 ಜನ ಆರೋಪಿತರನ್ನು ಬಂಧಿಸಿದ್ದಾರೆ.

ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ- 08 , ಮಲೆಬೆನ್ನೂರು ಪೊಲೀಸ್ ಠಾಣೆ-04 , ಚನ್ನಗಿರಿ ಠಾಣೆ- 02, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ-02, ಹದಡಿ ಪೊಲೀಸ್ ಠಾಣೆ-02, ಮಾಯಕೊಂಡ  ಪೊಲೀಸ್ ಠಾಣೆ-01, ಸಂತೆಬೆನ್ನೂರು ಪೊಲೀಸ್ ಠಾಣೆ-01, ಹೊನ್ನಾಳಿ ಪೊಲೀಸ್ ಠಾಣೆ-01 ಹಾಗೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪೊಲೀಸ್ ಠಾಣೆ-05, ಹೀರೇಕರೂರು ಪೊಲೀಸ್ ಠಾಣೆ-04,  ಬ್ಯಾಡಗಿ ಪೊಲೀಸ್ ಠಾಣೆ-02, ಹಲಗೇರಿ ಪೊಲೀಸ್ ಠಾಣೆ-01, ರಾಣೆಬೆನ್ನೂರು ನಗರ ಪೊಲೀಸ್ ಠಾಣೆ-01, ಕುಮಾರಪಟ್ಟಣಂ ಪೊಲೀಸ್ ಠಾಣೆ-01, ಹಂಸಬಾವಿ ಪೊಲೀಸ್ ಠಾಣೆ- 02  ಹಾಗೂ ವಿಜಯ ನಗರ ಜಿಲ್ಲೆಯ ಹಿರೆಹಡಗಲಿ ಪೊಲೀಸ್ ಠಾಣೆ -01 ಪ್ರಕರಣ ದಾಖಲಾಗಿದೆ.

ಒಟ್ಟು 38 ಪ್ರಕರಣಗಳಲ್ಲಿ ಅಂದಾಜು ಮೌಲ್ಯ  14,80,000 ರೂ. ಬೆಲೆಯ ಒಟ್ಟು 38 ಬೈಕ್  ವಶಪಡಿಸಿಕೊಳ್ಳಲಾಗಿದೆ.  ಈ ಕಾರ್ಯಚಾರಣೆಗೆ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್,  ಹೆಚ್ಚುವರಿ ಪೊಲೀಸ್ ಅಧೀಕ್ಷ ರಾಮಗೊಂಡ ಬಸರಗಿ ಕೆ.ಎಸ್.ಪಿ.ಎಸ್  ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top