Connect with us

Dvgsuddi Kannada | online news portal | Kannada news online

ದಾವಣಗೆರೆ: ಹೊಂಚು‌ ಹಾಕಿ ಮನೆ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ; 4.75 ಲಕ್ಷ ಮೌಲ್ಯದ ನಗದು ಸಹಿತ ಚಿನ್ನ ವಶ

ದಾವಣಗೆರೆ

ದಾವಣಗೆರೆ: ಹೊಂಚು‌ ಹಾಕಿ ಮನೆ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ; 4.75 ಲಕ್ಷ ಮೌಲ್ಯದ ನಗದು ಸಹಿತ ಚಿನ್ನ ವಶ

ದಾವಣಗೆರೆ: ಮನೆಯಲ್ಲಿ ಯಾರು ಇಲ್ಲದನ್ನು ಹೊಂಚು‌ ಹಾಕಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಮನೆ ಕಳ್ಳರನ್ನು ವಿದ್ಯಾನಗರ, ಕೆ.ಟಿ.ಜೆ ನಗರ ಪೊಲೀಸರು ಜಂಟಿ ಕಾರ್ಯಚರಣೆ ಮೂಲಕ ಬಂಧಿಸಿದ್ದಾರೆ. ಆರೋಪಿಗಳಿಂದ 4,75,000-ರೂ ಬೆಲೆ ಬಾಳುವ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ನಾಗೇಶ್ ಎಂಬವರು ವಿದ್ಯಾನಗರ ಠಾಣೆಗೆ ಹಾಜರಾಗಿ, ಮನೆಯ ಬಾಗಿಲು ಹಾಕಿಕೊಂಡು ಸಂಬಂಧಿಕರ ಮದುವೆಗೆ ಹಿರಿಯೂರಿಗೆ ಹೋಗಿ ವಾಪಸ್ ಬಂದು ನೋಡಿದ್ದಾಗ ಯಾರೋ ಕಳ್ಳರು ಮನೆಯ ಬಾಗಿಲನ್ನು ಹೊಡೆದು 106 ಗ್ರಾಂ ಬಂಗಾರದ ಆಭರಣಗಳು 02 ಲಕ್ಷ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ‌ ಇನ್ಸ್ಪೆಕ್ಟರ್ ಗಳಾದ ಪ್ರಭಾವತಿ ಸಿ ಶೇತಸನದಿ ಪೊಲೀಸ್, ಶಶಿಧರ್ ಯು.ಜೆ ಕೆ.ಟಿ.ಜೆ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಕೆ.ಟಿ.ಜೆ ನಗರ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು ಸದರಿ ತಂಡವು ಜಂಟಿ ಕಾರ್ಯಚರಣೆಯ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ.

1) ಶ್ರೀನಿವಾಸ @ ಕರಾಟೆ ಸೀನಾ ತಂದೆ ಗಂಗಾಧರ 35 ವರ್ಷ, ವಾಸ- ಯಶವಂತಪುರ ಬೆಂಗಳೂರು 2)ವೆಂಕಟೇಶ @ ವೆಂಕಿ ತಂದೆ ರಮೇಶ್ 22ವರ್ಷ, ವಾಸ- ಚಕ್ರನಗರ ಅಂಧ್ರಳ್ಳಿ ಬೆಂಗಳೂರಿನ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದೆ. ಆರೋಪಿತಗಳಿಂದ ವಿದ್ಯಾನಗರ ಪೊಲೀಸ್ ಠಾಣೆಯ 2 ಮನೆಗಳ್ಳತನ ಪ್ರಕರಣ ಹಾಗೂ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯ 1 ಮನೆಗಳ್ಳತನ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಒಟ್ಟು4.50 ಲಕ್ಷ ಬೆಲೆ ಬಾಳುವ 29 ಗ್ರಾಂ ಬಂಗಾರದ ಆಭರಣಗಳು, ಒಂದು ಫಾಸ್ಟ್ರಾಕ್ ವಾಚ್ ಹಾಗೂ 25 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಪತ್ತೆಗೆ ಪಿ.ಎಸ್.ಐಗಳಾದ ದೊಡ್ಡಮನಿ , ರೇಣುಕಾ, ವಿಶ್ವನಾಥ, ಎನ್.ಎಸ್ ಕಾಟೆ , ಮಂಜುನಾಥ ಕಲ್ಲದೇವರು, ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಆನಂದ ಮುಂದಲಮನಿ, ಗೋಪಿನಾಥ, ಮಂಜಪ್ಪ, ಯೋಗೀಶ್, ಭೋಜಪ್ಪ, ಮಂಜುನಾಥ ಮತ್ತು ಕೆ.ಟಿ.ಜೆ ನಗರ ಪೊಲೀಸ್ ಠಾಣೆಯ ಪ್ರಕಾಶ್, ಶಂಕರ್ ಜಾದವ್, ತಿಮ್ಮಣ್ಣ, ಶಿವರಾಜ್, ಮಂಜುನಾಥ, ಷಣ್ಮುಖ, ಮತ್ತು ಎಫ್.ಪಿ.ಬಿ ಘಟಕದ ಸಿಬ್ಬಂದಿಗಳಾದ ಅಕ್ತರ್, ನಾಗರಾಜ, ಮಾರುತಿ, ವಿರೇಶ್, ಚಾಲಕರಾದ ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ತಂಡದಲ್ಲಿದ್ದರು. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top