ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ವೈಟ್ ಪೀಲ್ಡ್ ನಿಂದ ನೇರವಾಗಿ ದಾವಣಗೆರೆಯ ಜಿಎಂಐಟಿ ಕ್ಯಾಂಪಸ್ ಹೆಲಿಪ್ಯಾಡ್ ಗೆ ಆಗಮಿಸಿದ್ದಾರೆ. ಹೆಲಿಪ್ಯಾಡ್ ನಿಂದ ಕಾರ್ಯಕ್ರಮ ಮುಖ್ಯ ವೇದಿಕೆ ವರೆಗೆ ತೆರೆದ ವಾಹನದಲ್ಲಿ ಮೂಲಕ ಆಮಿಸಿದ್ದಾರೆ. ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾಥ್ ನೀಡಿದರು.
Live : ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ, ದಾವಣಗೆರೆ.#ModiInMahaSangama #VijayaSankalpaYatre #BJPYeBharavase https://t.co/bVDVGiReMA
— BJP Karnataka (@BJP4Karnataka) March 25, 2023
ಪ್ರಧಾನಿ ನೋಡಲು 5 ಸಾವಿರಕ್ಕೂ ಹೆಚ್ಚು ಬಸ್ ಗಳಲ್ಲಿ 6 ರಿಂದ 8 ಲಕ್ಷಕ್ಕೂ ಹೆಚ್ಚು ಜನಸ್ತೋಮ ಸೇರಿದ್ದಾರೆ. . ಇಡೀ ದಾವಣಗೆರೆ ಕೇಸರಿಮಯವಾಗಿ ಸಿಂಗಾರಗೊಂಡಿದ್ದು, ಎಲ್ಲಿ ನೋಡಿದರೂ ಜನ ಕಾಣಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ 15 ಕೆಜಿ ಬೆಳ್ಳಿ ಇಟ್ಟಿಗೆ ಪ್ರಧಾನಿಗೆ ಕೊಡುಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ವಿಜಯನಗರ, ಬಳ್ಳಾರಿ, ತುಮಕೂರು, ಗದಗ, ಕೊಳ್ಳಪ, ರಾಯಚೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಸಾಗರೋಪಾದಿಯಲ್ಲಿ ಜನ ಸೇರಿದ್ದಾರೆ.



