Connect with us

Dvgsuddi Kannada | online news portal | Kannada news online

ಕರ್ನಾಟಕ ಉಜ್ವಲ ಭವಿಷ್ಯ, ವಿಕಾಸಕ್ಕೆ ಪೂರ್ಣ ಬಹುಮತದಿಂದ ಬಿಜೆಪಿ ಗೆಲ್ಲಿಸಿ: ದಾವಣಗೆರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ಮೋದಿ ಕರೆ

ದಾವಣಗೆರೆ

ಕರ್ನಾಟಕ ಉಜ್ವಲ ಭವಿಷ್ಯ, ವಿಕಾಸಕ್ಕೆ ಪೂರ್ಣ ಬಹುಮತದಿಂದ ಬಿಜೆಪಿ ಗೆಲ್ಲಿಸಿ: ದಾವಣಗೆರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ಮೋದಿ ಕರೆ

ದಾವಣಗೆರೆ: ಕರ್ನಾಟಕದ ಉಜ್ವಲ ಭವಿಷ್ಯ ವಿಕಾಸಕ್ಕಾಗಿ ಪೂರ್ಣ ಬಹುಮತದ ಸರ್ಕಾರ ಗೆಲ್ಲಿಸಬೇಕಿದೆ. ಕರ್ನಾಟಕ ಮನೆ ಮನೆಗೆ ತಲುಪುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ದಾವಣಗೆರೆಯ ಜಿಎಂಐಟಿ ಪಕ್ಕದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ದಾವಣೆಗೆರೆಗೆ ಬರುವ ಅವಕಾಶ ಮತ್ತೆ ಸಿಕ್ಕಿದೆ. ಪ್ರತಿ ಬಾರಿ ನಿಮ್ಮ ಆರ್ಶೀವಾದ ಹೆಚ್ಚುತ್ತಿದೆ. ದಾವಣೆಗೆರೆಯ ಜನತೆಯನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರ ತವರಲ್ಲಿ ಕಮಲ ಅರಳಿದೆ, ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ. ಇದು ವಿಜಯದ ಮುನ್ಸೂಚನೆ ಆರಂಭ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹೆಸರು ಹೇಳದೆ ಟಾಂಗ್ ಕೊಟ್ಟರು.

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಒಂದು ವೀಡಿಯೋ ನೋಡಿದೆ. ಮಾಜಿ ಸಿಎಂ ಒಬ್ಬರು ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೆ, ಬಿಜೆಪಿಯಲ್ಲಿ ಯಾರೂ ದೊಡ್ಡವಲ್ಲ ನಾವೆಲ್ಲರೂ ಒಂದೇ. ಕರ್ನಾಟಕದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನನ್ನ ಪರಮ ಮಿತ್ರ, ನನ್ನ ಶಕ್ತಿ, ನನ್ನ ಸಹೋದರು. ಬಿಜೆಪಿಯಲ್ಲಿ ಯಾರು ದೊಡ್ಡವರು ಇಲ್ಲ, ಯಾರು ಸಣ್ಣವರು ಇಲ್ಲ. ಇಲ್ಲಿ ಎಲ್ಲಾ ಕಾರ್ಯಕರ್ತರು ಸಮಾನರು. ಕರ್ನಾಟಕ ಬಿಜೆಪಿಯ ಪ್ರತಿ ಕಾರ್ಯಕರ್ತರು ನಮ್ಮ ಮಿತ್ರರು, ನನ್ನ ಸಹೋದರರು ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಹರಿಹರ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದನ್ನು ಮೊದಲಿಸಿದರು.

ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತದೆ. ಇದಕ್ಕೆ ಉದಾಹರಣೆ ಹಿಮಾಚಲ ಪ್ರದೇಶ. ಅವರು ಉದ್ಯೋಗ, ಭತ್ಯೆ, ಕುರಿತಂತೆ ಗ್ಯಾರಂಟಿ ನೀಡಿದ್ದರು. ಮೊನ್ನೆ ಬಜೆಟ್ ಘೋಷಣೆ ಆಯಿತು, ಆದರೆ ಚುನಾವಣಾ ಪೂರ್ವ ಯಾವ ಗ್ಯಾರಂಟಿಯೂ ಅಲ್ಲಿ ಇರಲಿಲ್ಲ, ಇಂತಹ ಕಾಂಗ್ರೆಸ್ ಗ್ಯಾರಂಟಿ ನಂಬಬೇಡಿ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಅವರ ನಾಯಕರ ತಿಜೋರಿ ತುಂಬುವ ಎಟಿಎಂ. ಚುನಾವಣೆ ವೇಳೆ ಸುಳ್ಳು ಗ್ಯಾರಂಟಿ ಕಾರ್ಡ್ ಹೊತ್ತು ತಿರುಗುತ್ತದೆ. ಹಿಮಾಚಲ ಪ್ರದೇಶದಲ್ಲಿ ದೊಡ್ಡ ಸುಳ್ಳಿನ ಸರಮಾಲೆ ಪೋಣಿಸಿತ್ತು. ನಿರುದ್ಯೋಗ ಭತ್ಯೆ ಮುಂತಾದ ಗ್ಯಾರಂಟಿಗಳಿಂದ ಭ್ರಮೆ ಹುಟ್ಟಿಸಿದ್ದರು ಎಂದರು.

ಕಾಂಗ್ರೆಸ್, ಜೆಡಿಎಸ್ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ  ರಾಜಕೀಯ ಮಾಡುತ್ತಿವೆ. ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿದೆ . ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ ಚುನಾವಣೆಯಲ್ಲಿ ಸುಳ್ಳು ಗ್ಯಾರಂಟಿ ಕಾರ್ಡ್ ನೀಡುವ ಅದು ಹಿಮಾಚಲದಲ್ಲಿ ಸುಳ್ಳಿನ ಸರಮಾಲೆ ಪೋಣಿಸಿತ್ತು. ನಿರುದ್ಯೋಗ ಭತ್ಯೆಯಂತಹ ಗ್ಯಾರಂಟಿಯಿಂದ ಭ್ರಮೆ ಹುಟ್ಟಿಸಿತು. ಈಗ ಅದರ ಹೆಸರೇ ಇಲ್ಲ. ಇಂಥ ಕಾಂಗ್ರೆಸ್ ಬಗ್ಗೆ ಭರವಸೆ ಇದೆಯೇ? ಎಂದರು.

ನಾನು ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಮೆಟ್ರೋ, ತುಮಕೂರಿನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಐಐಟಿ ಧಾರವಾಡ ಕ್ಯಾಂಪಸ್, ಜಲ ಜೀವನ್ ಮೀಷನ್ ಲೋಕಾರ್ಪಣೆ ಆಗಿದೆ. ಇದು ದಿನ-ರಾತ್ರಿ ಕೆಲಸ ಮಾಡುವ ಡಬಲ್ ಎಂಜಿನ್ ಸರ್ಕಾರ. ವಿಜಯ ಸಂಕಲ್ಪ ಯಾತ್ರೆಯ ಉತ್ಸಾಹ, ನವ ಶಕ್ತಿ, ಪ್ರತಿ ಬೂತ್ ಗೆ ತಲುಪಿಸಬೇಕಿದೆ. ಆ ಮೂಲಕ ಪ್ರತಿ ಬೂತನ್ನು ಗೆಲ್ಲುವ ಸಂಕಲ್ಪ ಮಾಡಬೇಕಿದೆ.

 

ಇಡೀ ವಿಶ್ವ ಭಾರತದೆಡೆ ನೋಡಿದರೆ, ಇಡೀ ಭಾರತ ಕರ್ನಾಟಕದ ಕಡೆ ನೋಡುತ್ತದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಕೋವಿಡ್ ನಡುವೆಯೂ ಕರ್ನಾಟಕ ವಿದೇಶಿ ನೇರ ಹೂಡಿಕೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಅದಕ್ಕೆ ಮುಖ್ಯಮಂತ್ರಿ & ಅವರ ಸಚಿವ ಸಂಪುಟಕ್ಕೆ ಅಭಿನಂದನೆ ಕೋರುತ್ತೇನೆ ಎಂದರು.

ದೇಶಾದ್ಯಂತ 7 ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಒಂದು ದಾವಣಗೆರೆಯಲ್ಲಿ ಇದೆ. ಇದು ಹಲವು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗದ ಅವಕಾಶ ದೊರಕುತ್ತಿದೆ. ಪ್ರಪಂಚದಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ವೋಟ್ ನೀಡಿದ ಕಾರಣಕ್ಕೆ ಜಗತ್ತಿನಲ್ಲಿ ಭಾರತದ ಪರ ಜೈಕಾರ ಮೊಳಗುತ್ತಿದೆ. ಇದು ಕರ್ನಾಟದಲ್ಲೂ ನಿಮ್ಮಿಂದ ಸಾಧ್ಯ ಆಗಬೇಕು. ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ ಬಗ್ಗೆ ಜೈ ಕಾರ ಕೇಳಿಬರುತ್ತದೆ. ಜಾಗತಿಕ ಮಟ್ಟದಲ್ಲಿ ನಮ್ಮ ಗೌರವ ಹೆಚ್ಚಿದೆ. ಮೋದಿ ಕಾರಣವಲ್ಲ, ನಿಮ್ಮ ಒಂದು ವೋಟ್‌ನಿಂದ. ಅದರಿಂದ ನಾವು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದ್ದೇವೆ. ನಿಮ್ಮ ಮತದ ತಾಕತ್ತು ತೋರಿಸುವ ಕಾಲ ಬಂದಿ ಎಂದರು.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ವಿಶ್ವ ಹುಲಿ ದಿನದ ಪ್ರಯುಕ್ತ ಕರ್ನಾಟಕದ ಹುಲಿಗಳ ಮಧ್ಯೆ ಇರಲು ಬರುತ್ತೇನೆ. ಜತೆಗೆ, ನಿಮ್ಮ ದರ್ಶನಕ್ಕಾಗಿ ನಾನು ಬರುತ್ತೇನೆ. ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ ಎಂದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top