ದಾವಣಗೆರೆ; ನಗರದ ಪ್ರತಿಷ್ಠಿತ ಬಡಾವಣೆಯಲ್ಲೊಂದಾದ ಪಿ.ಜೆ. ಬಡಾವಣೆಯ 550 ಕೋಟಿಗೂ ಅಧಿಕ ಮೌಲ್ಯದ 4.13 ಎಕರೆ ಜಾಗವನ್ನು ವಕ್ಫ್ ಬೋರ್ಡ್ (Waqf Board) ಕಬಳಿಸಲು ಹೊರಟಿದೆ. ಸರ್ಕಾರವೇ ಮಾಡಿದ ಬಡಾವಣೆಯನ್ನು ವಕ್ಫ್ ಸಚಿವ ಜಮೀರ್ ಅಹಮ್ಮದ್ ನುಂಗಲು ಮುಂದಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.
- ಪಿಜೆ ಬಡಾವಣೆ 4.13 ವಕ್ಫ್ ಎಕರೆ ವಕ್ಫ್ ಕಬಳಿಕೆ ಆರೋಪ
- ದಾವಣಗೆರೆ ಪಿ.ಜೆ. ಬಡಾವಣೆಗೆ ವಿಪಕ್ಷ ನಾಯಕ ಭೇಟಿ
- ಬಡಾವಣೆಯ ನಿವೇಶನ, ಮನೆ ಮಾಲೀಕರು, ವ್ಯಾಪಾರಸ್ಥರ ಅಹವಾಲು ಸ್ವೀಕಾರ
- ಪಿ.ಜೆ. ಬಡಾವಣೆಯ 4.13 ಎಕರೆ ಒಟ್ಟು ಮೌಲ್ಯ 550 ಕೋಟಿ
ನಗರದ ಪಿ.ಜೆ. ಬಡಾವಣೆಗೆ ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯರಾದ. ರವಿಕುಮಾರ್ , ನವೀನ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಸೇರಿ ಜೊತೆ ಭೇಟಿ ನೀಡಿದ್ದ ವೇಳೆ ವಕ್ಫ್ ಆಸ್ತಿಯೆಂದು ಕಂಡುಬಂದ ಸ್ಥಳಪರೀಶಿಲಿಸಿದರು. ಈ ವೇಳೆ ಬಡಾವಣೆ ನಿವೇಶನ,ಮನೆ ಮಾಲೀಕರು, ವ್ಯಾಪಾರಸ್ಥರ ಅಹವಾಲು ಆಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ವಕ್ಫ್ ಆಸ್ತಿ ಕಬಳಿಕೆ ಮುಂದಾಗಿದೆ. ನಗರಸಭೆ 1940ರಲ್ಲಿ ಅಭಿವೃದ್ಧಿಪಡಿಸಿ, ಹಂಚಿಕೆ ಮಾಡಿದ್ದ ಇಲ್ಲಿನ ಪಿ.ಜೆ. ಬಡಾವಣೆಯ ಸುಮಾರು 1.88 ಲಕ್ಷ ಚದರ ಅಡಿಗಿಂತಲೂ ಅಧಿಕ ಜಾಗವನ್ನು ವಕ್ಫ್ ವಶಪಡಿಸಿಕೊಳ್ಳು ಹೊರಟಿದ್ದಾರೆ. ಜನ ಎಚ್ಚರಿಕೆಯಿಂದ ಇರಬೇಕು ಎಂದರು.
ಇನ್ಮುಂದೆ ನೋಟಿಸ್ ಕೊಡುವುದಿಲ್ಲವೆಂದು ಸರ್ಕಾರ ಹೇಳಿದೆ. ವಾಸ್ತವದಲ್ಲಿ ನೋಟಿಸ್‌ನಿಂದ ಏನೂ ಆಗುವುದಿಲ್ಲ. ಪಹಣಿಯಲ್ಲಿನ ಕಾಲಂ 9.11 ಬರುವ ವಕ್ಫ್ ಆಸ್ತಿ ಎಂಬ ಹಕ್ಕು ತೆಗೆದು ಹಾಕಬೇಕು. ಇದನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಎಂದರು.
ಇಡೀ ಕರ್ನಾಟಕ ರಾಜ್ಯವನ್ನೇ ಖಬರಸ್ಥಾನ ಘೋಷಣೆ ಮಾಡಿ: ರೈತರು, ಜನಸಾಮಾನ್ಯರ, ಮಠ- ಮಂದಿರಗಳ ಆಸ್ತಿ, ವಕ್ಫ್ ಆಸ್ತಿ ಕಬಳಿಕೆ ಮಾಡಲು ಹೊರಟಿದೆ. ಸಿದ್ದರಾಮಯ್ಯಗೆ ವಿನಂತಿ ಮಾಡುತ್ತೇವೆ. ಇಡೀ ಕರ್ನಾಟಕ ರಾಜ್ಯವನ್ನೇ ಖಬರಸ್ಥಾನ ಅಂತಾ ಬರೆದು ಕೊಟ್ಟುಬಿಡಲಿ.
ಸರ್ಕಾರಿ ಕಾಮಗಾರಿಗಳ ಟೆಂಡರ್‌ನಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕೊಡುತ್ತಿದ್ದೀರಿ. ಮುಸ್ಲಿಮರೇನು ದಲಿತರಾ?, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡವಾ? ಒಂದು ರೆಕಾರ್ಡ್ ಆಗಿ ಹೋಗಲಿ, ಇಡೀ ಕರ್ನಾಟಕವನ್ನೇ ಬರೆದುಕೊಟ್ಟು ಬಿಡಿ.
ಮುಸ್ಲಿಮರು ಏನೇ ಕೇಳಿದರೂ ಕೊಡುವ ಸಿದ್ದರಾಮಯ್ಯ ಹಿಂದೂಗಳಿಗೆ ಮಾತ್ರ ನಾಳೆ ಬಾ, ನಾಡಿದ್ದು ಬಾ, ನೋಡೋಣ ಅಂತಾರೆ. ಮುಸ್ಲಿಂ ಬ್ರ್ಯಾಂಡ್ ಆಗಿರುವ ಸಿದ್ಧರಾಮಯ್ಯ, ಇಡೀ ರಾಜ್ಯವನ್ನು ವಕ್ಫ್ ಬೋರ್ಡ್‌ಗೆ ದಾನ ಮಾಡಿ ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಬಿಜೆಪಿ ವಿಪ ಸದಸ್ಯರಾದ ಎನ್.ರವಿಕುಮಾರ, ಕೆ.ಎಸ್.ನವೀನ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್.ಅನಿತಕುಮಾರ, ಅಣ್ಣೇಶ, ಅನಿಲಕುಮಾರ, ಬಿ.ಎಸ್.ಜಗದೀಶ, ಎಸ್.ಎಂ.ವೀರೇಶ ಹನಗವಾಡಿ ಸೇರಿದಂತೆ ಮತ್ತಿತರರು ಇದ್ದರು.