ದಾವಣಗೆರೆ: ಈ ಬಾರಿಯ ಮುಂಗಾರು ಹಂಗಾಮಿನ ಭತ್ತ ಕಟಾವು ಹಂತಕ್ಕೆ ಬಂದಿದ್ದು, ಭತ್ತ ಕಟಾವು ಯಂತ್ರಗಳಿಗೆ ಬೆಲೆ ನಿಗದಿಪಡಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ 63,700 ಹೆಕ್ಟೇರ್ ಪ್ರದೇಶದಲ್ಲಿರುವ ಭತ್ತವು ಕಟಾವಿಗೆ ಬಂದಿದೆ. ಖಾಸಗಿ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,600 ಹಾಗೂ ಟೈರ್ ಮಾದರಿಯ ಯಂತ್ರಕ್ಕೆ ಗಂಟೆಗೆ 1,900 ದರ ನಿಗದಿಪಡಿಸಲಾಗಿದೆ.
ಯಂತ್ರದ ಮಾಲೀಕರು ರೈತರಿಂದ ಹೆಚ್ಚಿನ ದರ ಪಡೆದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಅಧಿಕಾರಿಗಳನ್ನು ಸಂಪರ್ಕಿಸಬಹುದು. ರೈತರು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಯಂತ್ರಗಳ ಮಾಲೀಕರು ಹೆಚ್ಚಿನ ದರ ನಿಗದಿಪಡಿಸಿದರೆ ಕಂದಾಯ, ಕೃಷಿ ಇಲಾಖೆ
ಲಭ್ಯವಿರುವಯಂತ್ರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.



