Connect with us

Dvgsuddi Kannada | online news portal | Kannada news online

ದಾವಣಗೆರೆ: ಮಾ. 06 ರಂದು ಅಪರೂಪದ ನೋಟು, ನಾಣ್ಯಗಳ ಪ್ರದರ್ಶನ

ಪ್ರಮುಖ ಸುದ್ದಿ

ದಾವಣಗೆರೆ: ಮಾ. 06 ರಂದು ಅಪರೂಪದ ನೋಟು, ನಾಣ್ಯಗಳ ಪ್ರದರ್ಶನ

ದಾವಣಗೆರೆ: ರೋಟರಿ ಸಂಸ್ಥೆ ವತಿಯಿಂದ ಮಾ. 06 ರಂದು  ಅಪರೂಪದ ನೋಟು ಹಾಗೂ ನಾಣ್ಯಗಳ ಪ್ರದರ್ಶನವನ್ನು ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ ಆರ್.ಟಿ.ಮೃತ್ಯುಂಜಯ ಮಾಹಿತಿ ನೀಡಿದ್ದು, ಮಾ. 06ರಂದು ಬೆಳಗ್ಗೆ 11ಕ್ಕೆ ಮೇಯರ್ ಎಸ್.ಟಿ ವಿರೇಶ್ ನೋಟುಗಳು-ನಾಣ್ಯಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲ್ದಾರ್ ಗಿರೀಶ್, ಡಿಡಿಪಿಐ ಪರಮೇಶ್ವರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದೊಂದು ಅಪೂರ್ವ ಸಂಗ್ರಹವಾಗಿದ್ದು ಬೆಳಗಾವಿಯ ಈರಪ್ಪ ಗುರುಲಿಂಗ ಪರಮಶೆಟ್ಟಿ ಅವರು ಕಳೆದ 5 ದಶಕಗಳಿಂದ ಸಂಗ್ರಹಿಸಿರುವ ಅಪರೂಪದ ನೋಟುಗಳು ಹಾಗೂ ನಾಣ್ಯಗಳು ದೇಶದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡಿವೆ. 1ರಿಂದ ಸಾವಿರರೂಗಳ ಹಳೇಯ ಬೆಳ್ಳಿ ನಾಣ್ಯಗಳು ಪ್ರದರ್ಶನದಲ್ಲಿವೆ. ಒಂದೇ ಮೌಲ್ಯದ 150ಕ್ಕೂ ಹೆಚ್ಚು ವಿವಿಧ ನೋಟುಗಳ ನೋಟ ಅಪರೂಪದ ಆಕರ್ಷಣೆಯಾಗಿದೆ.

ಈರಪ್ಪ ಗುರುಲಿಂಗ ಪರಮಶೆಟ್ಟಿ ಅವರ ಸಂಗ್ರಹ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ  ಸತತ 3 ವರ್ಷಗಳ ಕಾಲ ನಮೂದಿಸಲ್ಪಟ್ಟಿದೆ. ನೋಟುಗಳು ಹಾಗೂ ನಾಣ್ಯಗಳು ದೇಶ-ವಿದೇಶದ ಅಪೂರ್ವ ಸಂಗ್ರಹವಾಗಿದೆ. ಈ ಪ್ರದರ್ಶನ ಮಾ.6 ಮತ್ತು 7 ರಂದು ನಡೆಯಲಿದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಅಂದನೂರು ಆನಂದಕುಮಾರ್, ವಿಕಾಸ್ ಕುಮಾರ್ ಸಂಘ್ವಿ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಸಿನಿಮಾ, ಕ್ರೀಡೆ ಜೊತೆ ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುವುದು. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top