ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಫೆಬ್ರವರಿ 24, 25ರಂದು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಶಾಂತ ರೀತಿಯಲ್ಲಿ ವಿಜೃಂಭಣೆಯಿಂದ ಜಾತ್ರೆ ಮಹೋತ್ಸವ ಆಚರಿಸಲು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ದಾವಣಗೆರೆ: ಜಿಲ್ಲೆಗೆ ಎರಡು ಶ್ರಮಿಕ ವಸತಿ ಶಾಲೆ ಮಂಜೂರು
ನಗರದ ದುಗ್ಗಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪ್ರದಾಯದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ನಗರ ದೇವತೆ ದುಗ್ಗಮ್ಮ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಬಹಳ ಹಿಂದಿನಿಂದಲೂ ನಗರ ದೇವತೆ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಅದ್ಧೂರಿಯಾಗಿ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
- ಜನವರಿ 20ರಂದು ಹಂದರ ಕಂಬ ಪೂಜೆ
- ಫೆಬ್ರವರಿ 22 ರಂದು ಸಾರು ಹಾಕುವುದು
- ಫೆಬ್ರವರಿ 24 ರಂದು ಮಹಾಪೂಜೆ
- ಫೆಬ್ರವರಿ 25ರಂದು ಚರಗ
ಇದೇ ತಿಂಗಳು (ಜನವರಿ) 20ರಂದು ಹಂದರ ಕಂಬ ಪೂಜೆ ನಡೆಯಲಿದೆ. ಫೆ .22 ರಂದು ಸಾರು ಹಾಕುವುದು. ಫೆಬ್ರವರಿ 24, 25ರಂದು ದುರ್ಗಂಬಿಕಾ ದೇವಿಯ ಜಾತ್ರೆ ನಡೆಲಿದೆ ಎಂದು ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ ಮಾಜಿ ಸಚಿವ ರೇಣುಕಾಚಾರ್ಯ
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ, ಪೊಲೀಸ್, ಟ್ರಸ್ಟ್ ಸಹಯೋಗದೊಂದಿಗೆ ಬಹಳ ವಿಜೃಂಭಣೆಯಿಂದ ಹಬ್ಬ ಆಚರಣೆ ನಡೆಯಲಿದೆ. ಎಲ್ಲಾ ಭಕ್ತಾಧಿಗಳು ಶಾಂತ ರೀತಿಯಿಂದ ದೇವಿಯ ಆಶೀರ್ವಾದ ಪಡೆಯಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಟ್ರಸ್ಟಿನ ಎಲ್ಲಾ ಸದಸ್ಯರು, ಗೌಡರು, ಶಾನುಭೋಗರು, ರೈತರು, ಬಾರೀಕರು, ಬಣಕಾರು, ಕುಂಬಾರರು, ಬಡಗಿ, ತಾಳವಾರರು, ಭಕ್ತರು, ಊರಿನ ಮುಖಂಡರು ಭಾಗವಹಿಸಿದ್ದರು.



