ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದ ಜನಹಿತ ಪಕ್ಷದ ಅಭ್ಯರ್ಥಿ ಚುನಾವಣೆ ಠೇವಣಿಗಾಗಿ 25 ಸಾವಿರ 10 ರೂ.ನಾಣ್ಯಗಳನ್ನು ಚೀಲದಲ್ಲಿ ತಂದು ಅಚ್ಚರಿ ಮೂಡಿಸಿದರು. 10 ರೂ. ನಾಣ್ಯಗಳ ಜನಜಾಗೃತಿಗಾಗಿ ತಂದಿರುವುದಾಗಿ ಅಭ್ಯರ್ಥಿ ಹೇಳಿದ್ದು, ಅಧಿಕಾರಿಗಳು ಅನಿವಾರ್ಯವಾಗಿ 10 ರೂ. ನಾಣ್ಯಗಳನ್ನು ಸ್ವೀಕರಿಸಿ ಎರಡ್ಮೂರು ಬಾರಿ ಎಣಿಸುವಷ್ಟರಲ್ಲಿ ಸುಸ್ತಾದರು.
ಹತ್ತು ರೂ.ಗಳ ಚಲಾವಣೆಯಲ್ಲಿದೆ ಎಂಬ ಜಾಗೃತಿ ಮೂಡಿಸಲು ನಾಣ್ಯಗಳನ್ನು ಸಂಗ್ರಹಿಸಿ ಠೇವಣಿಯಾಗಿ ನೀಡಿದ್ದೇನೆ ಎಂದು ಜನಹಿತ ಪಕ್ಷದ ಅಭ್ಯರ್ಥಿ ದೊಡ್ಡೇಶ್ ಹೇಳಿದ್ದಾರೆ. ಚುನಾವಣೆ ಸ್ಪರ್ಧಾ ಠೇವಣಿ 25 ಸಾವಿರ ರೂ.ಗಳನ್ನು 10 ರೂ.ಗಳ ನಾಣ್ಯ ರೂಪದಲ್ಲಿ ನೀಡದ್ದು, ನಾಣ್ಯದ ಚೀಲವನ್ನು ಹೊತ್ತು ತಂದು ನಾಮಪತ್ರ ಸಲ್ಲಿಸಿದರು. ನಾಣ್ಯ ಕಂಡು ಚುನಾವಣ ಸಿಬಂದಿ ಒಮ್ಮೆ ಹೌಹಾರಿದರು. ಬಳಿಕ ಎರಡ್ಮೂರು ಬಾರಿ ಎಣಿಸಿ ಲೆಕ್ಕ ಪಡೆದರು.