Connect with us

Dvgsuddi Kannada | online news portal | Kannada news online

ದಾವಣಗೆರೆ ಮೇಯರ್ ಚುನಾವಣೆ: ಮತಪಟ್ಟಿಗೆ ಸಚಿವ ಆರ್. ಶಂಕರ್ ಹೆಸರು ಸೇರ್ಪಡೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಕಾಂಗ್ರೆಸ್

ಪ್ರಮುಖ ಸುದ್ದಿ

ದಾವಣಗೆರೆ ಮೇಯರ್ ಚುನಾವಣೆ: ಮತಪಟ್ಟಿಗೆ ಸಚಿವ ಆರ್. ಶಂಕರ್ ಹೆಸರು ಸೇರ್ಪಡೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಕಾಂಗ್ರೆಸ್

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮತದಾರರ ಪಟ್ಟಿಯಲ್ಲಿ ಸಚಿವ R.ಶಂಕರ್ ಹೆಸರು ಸೇರ್ಪಡೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್​​ ಮೊರೆಹೋಗಿದ್ದಾರೆ.

ಫೆ. 24ರಂದು ಪಾಲಿಕೆಯ ಮೇಯರ್​ ಚುನಾವಣೆಯಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರು ದಾವಣಗೆರೆ ಮತ್ತು ರಾಣೆಬೆನ್ನೂರಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್​​ ಮೊರೆಹೋಗಿದ್ದಾರೆ. ಇದೀಗ, ಫೆಬ್ರವರಿ 17ರಂದು ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಸಚಿವ ಆರ್.ಶಂಕರ್​ ಹೆಸರು ರಾಣೆಬೆನ್ನೂರು ನಗರಸಭೆ ಮತದಾರರ ಪಟ್ಟಿಯ ಜೊತೆಗೆ ದಾವಣಗೆರೆ ವಿಳಾಸ ನೀಡಿ ನಗರ ಪಾಲಿಕೆ ಮತದಾರರ ಪಟ್ಟಿಯಲ್ಲೂ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಆರ್.ಶಂಕರ್​ ಹೆಸರು ಸೇರ್ಪಡೆ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಕೆಯಾಗಿದೆ.ಇದೀಗ, ಫೆ.17 ರಂದು ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಎಲ್ಲರ ಗಮನ ನೆಟ್ಟಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});