ದಾವಣಗೆರೆ: ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದೆ. ಕಾಂಗ್ರೆಸ್ –ಬಿಜೆಪಿ ಅಧಿಕಾರಕ್ಕೇರಲು ಕೊನೆ ಕ್ಷಣದ ವರೆಗೂ ಫೈಟ್ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿನ್ನೆ (ಫೆ.23) ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತ ಶಾಕ್ ಕಾದಿತ್ತು. ದಾವಣಗೆರೆ ಮೇಯರ್ ಚುನಾವಣೆ; ಬಿಜೆಪಿಗೆ ಭರ್ಜರಿ ಜಯ; ಎಸ್. ಟಿ. ವೀರೇಶ್ ನೂತನ ಮೇಯರ್ ; ಶಾಮನೂರು ಶಿವಶಂಕರಪ್ಪ ಚುನಾವಣೆಗೆ ಗೈರು
ಕಾಂಗ್ರೆಸ್ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಆಪ್ತ ದೇವರಮನಿ ಶಿವಕುಮಾರ್, ದಿಢೀರ್ ಆಗಿ ಬಿಜೆಪಿ ಪಾಳ್ಯದಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದ್ದರು. ನಿನ್ನೆ ರಾತ್ರಿಯೇ ಪಾಲಿಕೆ ಸದಸ್ಯತ್ವ ಸ್ಥಾನಕ್ಕೆ ಮೇಯರ್ ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದರು. ಆ ಕ್ಷಣವೇ ಕಾಂಗ್ರೆಸ್ ಗೆ ಈ ಬಾರಿಯೂ ದಾವಣಗೆರೆ ಮಹಾನಗರ ಪಾಲಿಕೆ ಕೈ ತಪ್ಪುವ ಮುನ್ಸೂಚನೆ ಸಿಕ್ಕಿತ್ತು. ಆದರೂ, ಗಡಿಗುಡಾಳ್ ಮಂಜುನಾಥ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಭರತ ಹುಣ್ಣಿಮೆ: ಹೊರಗಿನ ಭಕ್ತರಿಗೆ ಉಚ್ಚಂಗಿದುರ್ಗ ಪ್ರವೇಶಕ್ಕೆ ನಿಷೇಧ
ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಮಂಗಳವಾರ ರಾತ್ರಿ ಖಚಿತವಾಗಿತ್ತು. ಹೀಗಾಗಿ ಇಂದು ನಡೆಯುವ (ಫೆ .24) ಚುನಾವಣಗೆ ಕಾಂಗ್ರೆಸ್ ಎಂಎಲ್ಸಿಗಳು ಬರುವುದು ಬೇಡ ಎಂಬ ಸೂಚನೆ ಹೋಗಿತ್ತು. ಇದರಿಂದ ಮೂವರು ಎಂಎಲ್ಸಿಗಳು ಗೈರಾಗಿದ್ದಾರೆ. ಇನ್ನು ಸ್ವತಃ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಹಾಜರಾಗಿಲ್ಲ. ಇದಲ್ಲದೆ ಜೆಡಿಎಸ್ ಸದಸ್ಯೆ ನೂರ್ ಜಹಾನ್ ಬಿ, ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯೆ ಜಯಮ್ಮ ಗೋಪಿನಾಯ್ಕ್ ಕೂಡಾ ಗೈರಾಗಿದ್ದರು.
ಬಿಜೆಪಿಯಿಂದ ಸಚಿವ ಆರ್ ಶಂಕರ್ , ಸಂಸದ ಜಿ ಎಂ ಸಿದ್ದೇಶ್ವರ್ , ಚಿದಾನಂದಗೌಡ ಸೇರಿದಂತೆ ಬಿಜೆಪಿಯ 29 ಸದಸ್ಯರು ಭಾಗಿಯಾಗಿದ್ದಾರೆ.ಎಂ ಎಲ್ ಸಿ ಗಳಾದ ಕೆಸಿ ಕೊಂಡಯ್ಯ, ರಘು ಆಚಾರ್ , ಯುಬಿ ವೆಂಕಟೇಶ್ ಗೈರು ಆಗಿದ್ದರು. ಕಾಂಗ್ರೆಸ್ ಪರವಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಸೇರಿ ಪಾಲಿಕೆ 21 ಸದಸ್ಯರು ಹಾಜರಾಗಿದ್ದರು.