ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ನಾಲ್ಕು ಕಡೆ ಪಾಲಿಕೆ ವತಿಯಿಂದ ಫುಡ್ ಕೋರ್ಟ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಮೇಯರ್ ಅಜಯ್ ಕುಮಾರ್ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ನಗರದಲ್ಲಿ ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವರಿಗೆ ಅನುಕೂಲಕ ಮಾಡಿಕೊಡುವ ದೃಷ್ಠಿಯಿಂದ ನಗರದಲ್ಲಿ ನಾಲ್ಕು ಕಡೆ ಫುಡ್ ಕೋರ್ಟ್ ತೆರೆಯಲು ಪಾಲಿಕೆ ಆಯುಕ್ತರ ಜೊತೆ ಚರ್ಚೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಗುಂಡಿ ಮಹದೇವಪ್ಪ ಸರ್ಕಲ್ ನ ಫುಡ್ ವ್ಯಾಪಾರಿಗಳಿಗೆ ಸ್ವಲ್ಪವೇ ದೂರದಲ್ಲಿರುವ ಶೆಟ್ಟಿ ಪಾರ್ಕ್, ಅರುಣ ಚಿತ್ರ ಮಂದಿರ ಬಳಿಯ ವ್ಯಾಪಾರಿಗಳಿಗೆ ಫಿಶ್ ಮಾರುಕಟ್ಟೆಯ ಸಮೀಪ, ನಿಜಲಿಂಗಪ್ಪ ಬಡಾವಣೆಯ 40 ಫಿಟ್ ಬಫರ್ ಝೋನ್ ಹಾಗೂ ಲಕ್ಷ್ಮೀ ಫ್ಲೋರ್ ಮಿಲ್ ನಿಂದ ಕ್ಲಾಕ್ ಸರ್ಕಲ್ ವರೆಗೆ ಫುಡ್ ಮತ್ತು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.



