ದಾವಣಗೆರೆ : ಮಾವು ಹೂ ಬಿಡುವ ಸಮಯದಲ್ಲಿ ಅಕಾಲಿಕ ಮಳೆ ಬಿದ್ದಿರುವ ಕಾರಣ ಸಂಭವನೀಯ ಹೂ ತೆನೆ ಕಪ್ಪಾಗುವ ಹಾಗೂ ಬೂದಿ ರೋಗಗಳನ್ನು ತಡೆಗಟ್ಟಲು ಹೆಕ್ಸಾಕೊನಜೋಲ್ 2 ಮಿ.ಲೀ ಅಥವಾ ಥಯೋಫಿನೇಟ್ ಮಿಡೈಲ್ 1 ಗ್ರಾಂ ಅಥವಾ ಕಾರ್ಬನ್‍ಡೈಜಿಮ್ 1.5 ಗ್ರಾಂ ಅಥವಾ ಟ್ರಸಕ್ಲೊಜೋಲ್ 0.25 ಗ್ರಾಂ/ಪ್ರತಿ ಲೀಟರ್ ನೀರಲ್ಲಿ ಬೆರೆಸಿ ಸಿಂಪಡಿಸುವುದು.
ಜಿಗಿ ಹುಳು: ಮೋಡ ಕವಿದ ವಾತಾವರಣದಲ್ಲಿ ಜಿಗಿ ಹುಳುಗಳ ಬಾಧೆ ಕಂಡುಬಂದಲ್ಲಿ ತಡೆಗಟ್ಟಲು ರೈತರು ಇಮಿಡಾ ಕ್ಲೋಪ್ರಿಡ್ ಶೇ.17.8 ಎಸ್.ಎಲ್-0.5 ಮಿ.ಲೀ ಅಥವಾ ಪ್ಯೂಪ್ರೊನಿಲ್ 1.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು ಅಥವಾ ಹಾರ್ಟಿಕ್ಲಿನಿಕ್ ವಿಷಯ ತಜ್ಞರು, ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



