Connect with us

Dvgsuddi Kannada | online news portal | Kannada news online

ದಾವಣಗೆರೆ: ಮಲೇಬೆನ್ನೂರು ಪುರಸಭೆಗೆ ನಾಮಪತ್ರ ಸ್ವೀಕರಿಸುವ ವಾರ್ಡ್ ವಾರು ಸ್ಥಳದ ವಿವರ ಇಲ್ಲಿದೆ….

ದಾವಣಗೆರೆ

ದಾವಣಗೆರೆ: ಮಲೇಬೆನ್ನೂರು ಪುರಸಭೆಗೆ ನಾಮಪತ್ರ ಸ್ವೀಕರಿಸುವ ವಾರ್ಡ್ ವಾರು ಸ್ಥಳದ ವಿವರ ಇಲ್ಲಿದೆ….

ದಾವಣಗೆರೆ:  ಮಲೇಬೆನ್ನೂರು ಪುರಸಭೆ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ನಾಮಪತ್ರಗಳನ್ನು ಸ್ವೀಕರಿಸುವ ಚುನಾವಣಾ ಅಧಿಕಾರಿಗಳು, ಕಚೇರಿಯ ಹೆಸರು ಮತ್ತು ವಿಳಾಸ ಮಾಹಿತಿಯನ್ನು ನೀಡಲಾಗಿದೆ.

ವಾರ್ಡ್ ಸಂಖ್ಯೆ 01 ರಿಂದ 08 ರವರೆಗೆ ಹರಿಹರದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮೊ.ಸಂ:7259921206 ಇವರನ್ನು ಚುನಾವಣಾ ಅಧಿಕಾರಿಯನ್ನಾಗಿ, ಕಾಳಿದಾಸ ಪ್ರೌಢಶಾಲೆಯ ಸಹ ಶಿಕ್ಷಕ ನಿಜಲಿಂಗಪ್ಪ ಮೊ.ಸಂ: 7829271286 ಇವರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ನಾಮಪತ್ರಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ನಂ-3 ಭದ್ರಾನಾಲಾ ಉಪವಿಭಾಗ ಮಲೇಬೆನ್ನೂರು ಇಲ್ಲಿ ಸ್ವೀಕರಿಸಲಾಗುವುದು.

ವಾರ್ಡ್  ಸಂಖ್ಯೆ 09 ರಿಂದ 16 ರವರೆಗೆ ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸಿ.ಸಿದ್ದಪ್ಪ ಮೊ.ಸಂ:9449423164 ಚುನಾವಣಾ ಅಧಿಕಾರಿಯನ್ನಾಗಿ, ಹನಗವಾಡಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಕುಬೇಂದ್ರ ಮೆಕ್ಕಪ್ಪನವರ್ ಮೊ.ಸಂ: 9141281244 ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಿದ್ದು, ನಾಮಪತ್ರಗಳನ್ನು ಮಲೇಬೆನ್ನೂರು ಪುರಸಭೆ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು.

ವಾರ್ಡ್ ಸಂಖ್ಯೆ 17 ರಿಂದ 23 ರವರೆಗೆ ಹರಿಹರದ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎ.ನಾರನಗೌಡ ಮೊ.ಸಂ:9822931154 ಚುನಾವಣಾ ಅಧಿಕಾರಿಯನ್ನಾಗಿ, ಕುಂಬಳೂರು ಶರಣಸಂಗಮ ಶಾಲೆ ಸಹ ಶಿಕ್ಷಕ ಗುಂಡಣ್ಣನವರ್ ಮೊ.ಸಂ: 9731066782 ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಿದ್ದು, ನಾಮಪತ್ರಗಳನ್ನು ಮಲೇಬೆನ್ನೂರು ಕೃಷಿ ಅಧಿಕಾರಿಗಳ ಕಚೇರಿ, ರೈತ ಸಂಪರ್ಕ ಕೇಂದ್ರ ಇಲ್ಲಿ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top