Connect with us

Dvgsuddi Kannada | online news portal | Kannada news online

ದಾವಣಗೆರೆ ಗಾರ್ಬೆಜ್ ಫ್ರೀ ಸಿಟಿನಾ..? ಸಾರ್ವಜನಿಕರು ಪಾಲಿಕೆಗೆ ತಮ್ಮ ಅಭಿಪ್ರಾಯ ತಿಳಿಸಿ

ದಾವಣಗೆರೆ

ದಾವಣಗೆರೆ ಗಾರ್ಬೆಜ್ ಫ್ರೀ ಸಿಟಿನಾ..? ಸಾರ್ವಜನಿಕರು ಪಾಲಿಕೆಗೆ ತಮ್ಮ ಅಭಿಪ್ರಾಯ ತಿಳಿಸಿ

ದಾವಣಗೆರೆ: ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸರ್ಕಾರವು ದೇಶದ ನಗರಗಳಲ್ಲಿ ಸ್ವಚ್ಚತೆಯ ಪದ್ಧತಿಯನ್ನು ಸುಧಾರಿಸಿ ಉನ್ನತ ಮಟ್ಟದಲ್ಲಿ ನಿರ್ವಹಣೆಯಾಗುವಂತೆ “ಗಾರ್ಬೆಜ್ ಫ್ರೀ ಸಿಟಿ”  ಅಂಶವನ್ನು ಈಗಾಗಲೇ ಜಾರಿ ಮಾಡಿದ್ದು ಮಾನದಂಡಗಳು ನಿಗದಿಯಾಗಿರುತ್ತದೆ.

ದಾವಣಗೆರೆ ನಗರವು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಈಗಾಗಲೇ ODF+ (Open Defecation Free) ಎಂದು ಪ್ರಮಾಣೀಕೃತಗೊಂಡಿದೆ. ಈ ಅಂಶಗಳನ್ನು ಪರಿಗಣಿಸಿ ದಾವಣಗೆರೆ ಮಹಾನಗರವನ್ನು ‘ಜಿಎಫ್‍ಸಿ 1 ಸ್ಟಾರ್  ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಯಾವುದಾದರು ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗ, ಮಹಾನಗರಪಾಲಿಕೆ, ದಾವಣಗೆರೆ ಕಚೇರಿಗೆ ಫೆ.28 ರೊಳಗಾಗಿ ಸಲ್ಲಿಸಬೇಕೆಂದು ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾನದಂಡಗಳಂತೆ ಪಾಲಿಕೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿರುತ್ತದೆ. ಪಾಲಿಕೆಯ ಎಲ್ಲಾ ವಾರ್ಡ್‍ಗಳ ಮನೆ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಘಟಕಗಳು ಇತ್ಯಾದಿಗಳಿಂದ ಶೇ. 100ರಷ್ಟು ಕಸ ಸಂಗ್ರಹಣೆಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಕಸವನ್ನು ಮೂಲದಲ್ಲೇ ವಿಂಗಡಿಸಿ ಪಾಲಿಕೆ ಟಿಪ್ಪರ್ ವಾಹನಗಳಿಗೆ ನೀಡುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ನೀಡಿ ಪದ್ಧತಿ ಅನುಸರಿಸುವಂತೆ ಕ್ರಮ ಜರುಗಿಸಲಾಗಿದೆ ಹಾಗೂ ತ್ಯಾಜ್ಯ ಸಂಸ್ಕರಣೆಗೆಂದು ದಾವಣಗೆರೆ ಮಹಾನಗರದಲ್ಲಿ 200 ಟಿ.ಪಿ.ಡಿ ಸಾಮಥ್ರ್ಯದ ಕಂಪೋಸ್ಟ್ ಘಟಕ ಸ್ಥಾಪನೆಗೆ ಡಿಪಿಆರ್ ಅನುಮೋದನೆ ದೊರೆತಿದ್ದು ಟೆಂಡರ್ ಪ್ರಕ್ರಿಯೆ ಈಗಾಗಲೆ ಆರಂಭಿಸಲಾಗಿದೆ. ಹಾಗೆಯೆ ಪ್ರತಿದಿನ ಅಂದಾಜು 30 ರಿಂದ 35 ಟನ್ ತ್ಯಾಜ್ಯವನ್ನು ಸಂಸ್ಕರಿಸಿ 4 ಎಂಎಂ ಸ್ಕ್ರೀನ್ ಮೂಲಕ ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top