ದಾವಣಗೆರೆ: ಕರ್ನಾಟಕ ರಿಜಿಸ್ಟರ್ ಸ್ಕಾರ್ಪಿಯೋ ಕಾರಿನಲ್ಲಿ 67 ದೇಶಗಳನ್ನು ಸುತ್ತಿ ಕನ್ನಡ ನಾಡು-ನುಡಿ, ಪ್ರವಾಸೋದ್ಯಮ ಬಗ್ಗೆ ಪ್ರಚಾರ ಮಾಡಿದ್ದ ಪುತ್ತೂರಿನ ಮೊಹಮ್ಮದ್ ಸಿನಾನ್ (30) ನನ್ನು ದಾವಣಗೆರೆ ಕನ್ನಡ ಪರ ಸಂಘಟನೆಗಳು ಆಯೋಜಿಸಿದ್ದ ಕನ್ನಡ ರಾಜ್ಯೋತ್ವವ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನಿಸಿದ್ದಾರೆ. ನಿಮ್ಮ ಕಾರಿನಲ್ಲಿ ಕನ್ನಡವೇ ಭಾಷೆ ಇಲ್ಲ, ಕಾರಿನಲ್ಲಿ ದೊಡ್ಡದಾಗಿ ಕನ್ನಡ ಭಾಷೆ ಬರೆದುಕೊಳ್ಳಬೇಕು ಎಂದು ಜಗಳ ತೆಗೆದು ಅವಮಾನಿಸಿದ್ದು, ಈ ವಿಡಿಯೋವನ್ನು ಮೊಹಮ್ಮದ್ ಸಿನಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ಮೂಲದ ಮಹಮ್ಮದ್ ಸಿನಾನ್ ಎಂಬ ಯುವಕ, ತಾಯಿ ಊರು ನೆರೆಯ ರಾಜ್ಯ ಕೇರಳದಲ್ಲಿ ಹುಟ್ಟಿ ಬಾಲ್ಯವನ್ನು ಅಲ್ಲೇ ಕಳೆದಿದ್ದಾನೆ. ಸ್ಪಷ್ಟವಾಗಿ ಕನ್ನಡ ಮಾತನಾಡಲೂ ಬರದಿದ್ದರೂ ಸಿನಾನ್, ಕರ್ನಾಟಕದ ಪ್ರವಾಸಿ ತಾಣಗಳನ್ನು ವಿಶ್ವದ 75 ದೇಶಗಳಿಗೆ ತಿಳಿಸಬೇಕು ಎಂಬ ಆಸೆ ಹೊಂದಿದ್ದನು.ಇದಕ್ಕಾಗಿ ಕನ್ನಡ ಕಲಿತು, ಕಳೆದ ಎರಡು ವರ್ಷಗಳಿಂದ ಕರ್ನಾಟಕದ ರಿಜಿಸ್ಟೇಷನ್ ಹೊಂದಿದ ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವ ಪರ್ಯಾಟನೆ ಮಾಡುತ್ತಿದ್ದಾನೆ.
ಎರಡು ವರ್ಷಗಳಲ್ಲಿ 67 ದೇಶಗಳನ್ನು ಸುತ್ತಾಡಿ ಕರ್ನಾಟಕ ಪ್ರವಾಸೋದ್ಯಮ ಮತ್ತು ಕನ್ನಡ ಇತಿಹಾಸ ಪ್ರಚಾರ ಮಾಡಿ, 2024ರ ನವೆಂಬರ್ ನಲ್ಲಿ ರಾಜ್ಯಕ್ಕೆ ಬಂದಿದ್ದಾನೆ. ಸಿನಾನ್ ಕರ್ನಾಟಕಕ್ಕೆ ಬರುತ್ತಿದ್ದಂತೆ ಅವರನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಇದೇ ರೀತಿ ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವಂತೆ ಆಹ್ವಾನಿಸಲಾಗಿತ್ತು.
ಸಿನಾನ್ ಅನಾರೋಗ್ಯದ ನಡುವೆಯೇ ಕನ್ನಡದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆಂದು ದಾವಣಗೆರೆಗೆ ಬಂದಿದ್ದಾರೆ. ಸಿನಾನ್ ದಾವಣಗೆರೆಗೆ ವಿಶ್ವ ಪರ್ಯಟನೆ ಮಾಡಿದ ಕಾರಿನಲ್ಲಿಯೇ ಬಂದಿದ್ದಾನೆ. ಆದರೆ, ನೀವು ಕಾರಿನ ಮೇಲೆ ಕನ್ನಡವೇ ಅಗ್ರಗಣ್ಯ ಭಾಷೆಯಾಗಿ ಕಾಣಿಸುವಂತೆ ಬರಹಗಳನ್ನು ಬರೆದುಕೊಂಡಿಲ್ಲ. ಕೇವಲ ಕನ್ನಡಿಗ ಎಂದು ಮಾತ್ರ ಕನ್ನಡದಲ್ಲಿ ಬರೆದುಕೊಂಡಿದ್ದೀರಿ. ಜೊತೆಗೆ ನಿಮ್ಮ ಯೂಟ್ಯೂಬ್ ಚಾನೆಲ್ ಹೆಸರನ್ನೂ ಇಂಗ್ಲೀಷನ್‌ನಲ್ಲಿ ಹಾಕಿದ್ದೀರಿ. ಕನ್ನಡದ ಧ್ವಜ ಇದ್ದರಷ್ಟೇ ಸಾಲದು, ಕನ್ನಡದಲ್ಲಿ ದೊಡ್ಡದಾಗಿ ಬರೆಸಿಕೊಳ್ಳಬೇಕು. ನಿಮ್ಮ ಕಾರಿನ ಮೇಲಿರುವ ಇಂಗ್ಲೀಷ್ ಸ್ಟಿಕ್ಕರ್ ಕಿತ್ತುಹಾಕುವಂತೆ ಗಲಾಟೆ ಮಾಡಿದ್ದಾರೆ.
ಆಗ ಸಿನಾನ್ ಇದು ವಿಶ್ವ ಪರ್ಯಟನೆ ಮಾಡಿ ಕಾರು. ವಿಶ್ವದ ಎಲ್ಲ ದೇಶದ ಜನತೆಗೆ, ಅಧಿಕಾರಿಗಳಿಗೆ ತಿಳಿಯುವಂತೆ ಇಂಗ್ಲೀಷನ್‌ನಲ್ಲಿಯೇ ಬರೆದುಕೊಳ್ಳಬೇಕು. ಜೊತೆಗೆ, ನನ್ನ ಯೂಟೂಬ್ ಚಾನೆಲ್ ಅನ್ನು ಅದು ಹೇಗಿದೆಯೋ ಹಾಗೆ ಇಂಗ್ಲೀಷ್‌ನಲ್ಲಿ ಹಾಕದಿದ್ದರೆ ಅರ್ಥವೇ ಇರುವುದಿಲ್ಲ ಎಂದು ಮನವರಿಕೆ ಮಾಡಲು ಮುಂದಾಗಿದ್ದಾರೆ. ಆದರೆ, ಇದ್ಯಾವುದಕ್ಕೂ ಕೇಳಿಸಿಕೊಳ್ಳದ ಕನ್ಬಡ ಪರ ಸಂಘನೆ ಮುಖಂಡರು ಸಿನಾನ್‌ಗೆ ಗುಂಪು ಕಟ್ಟಿಕೊಂಡು ಸ್ಟಿಕ್ಕರ್ ಕೀಳುವಂತೆ, ಕನ್ನಡ ಬರೆಸಿಕೊಳ್ಳುವಂತೆ ಕಿರುಕುಳ ನೀಡಿದ್ದಾರೆ.
ನಾನು ಕನ್ನಡಿಗ….ಕನ್ನಡದ ಬಗ್ಗೆ ಅಭಿಮಾನ ನನಗೂ ಇದೆ. ಕನ್ನಡ ನಾಡು, ನುಡಿಯ ಇತಿಹಾಸ ಸೇರಿ ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ವಿಶ್ವಕ್ಕೆ ಸಾರಲು ಕನ್ನಡದ ಪ್ರತಿನಿಧಿಯಾಗಿಯೇ ಹೋಗಿದ್ದೇನೆ. ಕನ್ನಡದ ಬಗ್ಗೆ ಅಭಿಮಾನ ಇರುವುದರಿಂದಲೇ ಕಾರಿ ಹಿಂಭಾಗ ದೊಡ್ಡದಾಗಿ ಬರೆಸಿಕೊಂಡಿದ್ದೇನೆ. ಆದರೆ, ಕೆಲವು ದೇಶಗಳಲ್ಲಿ ಕಾರಿನ ಮೇಲೆ ದೊಡ್ಡದಾಗಿ ಕನ್ನಡ ಬರೆಸಿಕೊಂಡು ಹೋದರೆ ಪ್ರವೇಶನವನ್ನೇ ನೀಡುವುದಿಲ್ಲ ಎಂದು ಹೇಳುತ್ತಾರೆ. ಯಾವುದನ್ನೂ ಕೇಳದೇ ತಮ್ಮದೇ ಹಠ ಹಿಡಿದ ಕನ್ನಡಿಗರಿಗೆ ಹೇಗೆ ತಿಳಿಸಬೇಕು ಎಂದು ಗೊತ್ತಾಗದೇ ಗೊಂದಲದಲ್ಲಿದ್ದರು.
ಪರಿಸ್ಥಿತಿ ತಿಳಿಗೊಳಿಸಿದ ಸಂಸದೆ: ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಬಂದ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನಂತರ ಸಿನಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೇಯರ್ ಚಮನ್ ಸಾಬ್ ಮನವಿ ಮೇರೆಗೆ ಸಭೆಯಲ್ಲಿ ಭಾಗಿಯಾಗಿದ್ದಾಗಿ ಸಿನಾನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.